ಶಿವಮೊಗ್ಗ: ರೈತರಿಗೆ ಯಾವುದೇ ಧರ್ಮ ಇಲ್ಲ ಎಲ್ಲರೂ ರೈತರೇ. ಜಮೀರ್ ಅವರಿಗೆ ನಾನು ನಾಲ್ಕಾರು ಬಾರಿ ಕರೆದು ಬಂದಿದ್ದೇನೆ. ವಕ್ಫ್ ಬಗ್ಗೆ ಶಿವಮೊಗ್ಗಕ್ಕೆ ಬರುವವರು ಆಶ್ರಯ ಬಡಾವಣೆ ಬಗ್ಗೆ ಕರೆದರೆ ಬರಲ್ವ? ಹೀಗಾಗಿ ಜಮೀರ್ ಅವರನ್ನು ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಓಡಾಡಬೇಡ ಮಗನೇ ಎನ್ನಬೇಕಾಗುತ್ತದೆ. ಜಮೀರ್ ಬಂದರೆ ಹಿಂದೂ ಮುಸ್ಲಿಂ ಗಲಾಟೆ ನಡೆಯುತ್ತದೆ ಹಾಗಾಗಿ ಗಡಿಪಾರು ಮಾಡಬೇಕು ಎಂದು ಶಾಸಕ ಚನ್ನಬಸಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರ ರೈತರ ಜಾಗವನ್ನು ವಕ್ಫ್ ಗೆ ಸೇರಿಸುವುದನ್ನು ಮುಂದುವರಿಸಿದ್ದೇ ಆದರೆ ಇಡೀ ರಾಜ್ಯದ ಜನ ಜಮೀರ್ ಗೆ ಹೊಡಿತಾರೆ ಎಂದಿದ್ದೆ. ನಮ್ಮ ವೈಚಾರಿಕ ಹೋರಾಟ ನಾವು ಮಾಡಿಯೇ ಮಾಡುತ್ತೇವೆ. ನ. 26 ರಂದು ರಾಜ್ಯ ಮಟ್ಟದ ಹೋರಾಟ ಮಾಡಲಿದ್ದೇವೆ ಎಂದರು.
ಹಳೆ ಶಿವಮೊಗ್ಗದ ಅನೇಕ ಜಾಗವನ್ನು ವಕ್ಪ್ ಗೆ ಸೇರಿಸಲು ಹೊರಟಿದ್ದರು. ಕೂಡಲಿಯ ಅಕ್ಷೋಭ್ಯಾ ಮಠದ ಜಾಗವನ್ನು ಸಹ ವಕ್ಫ್ ಗೆ ಸೇರಿಸಲು ಹೊರಟಿದ್ದರು ಎಂದು ಆರೋಪಿಸಿದರು.
ಕಾಡಿನ ಸಂಪತ್ತಿಗೆ ಸೆಸ್ ಹಾಕುತ್ತಾರಂತೆ ಈ ಸರ್ಕಾರದ ಮಂತ್ರಿಗಳು. ಹಾಗಾದರೆ ಮರಗಿಡಗಳಿಂದ ಬರುವ ಗಾಳಿಗೂ ಸೆಸ್ ಹಾಕಿ. ಕಾಂಗ್ರೆಸ್ ತತ್ವವೇ ದೇಶ ತುಂಡು ಮಾಡುವುದು. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎಂದರೆ ಎಲ್ಲಾ ಮಂತ್ರಿಗಳು ಸೇರಿ ಭಿಕ್ಷೆ ಬೇಡಲಿ. ರಾಜ್ಯದ ಜನ ನಿಮಗೆ ಭಿಕ್ಷೆ ನೀಡುತ್ತಾರೆ ಎಂದು ಚನ್ನಬಸಪ್ಪ ಹೇಳಿದರು.