ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರು ಯುವಕರ ಮೃತದೇಹ ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ ಬುಧವಾರ ಸಂಜೆ ಘಟನೆ ನಡೆದಿತ್ತು. ಅಗ್ನಿಶಾಮಕ ಸಿಬ್ಬಂದಿ ಮೂವರು ಯುವಕರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದರು.
ತೆಪ್ಪದಲ್ಲಿ ಒಟ್ಟು ಐದು ಯುವಕರು ಪಯಣ ಮಾಡಿದ್ದರು. ಈ ವೇಳೆ ತೆಪ್ಪ ಮಗುಚಿತ್ತು. ನವೀನ್ ಮತ್ತು ಯಶ್ವಂತ್ ಎಂಬಿಬ್ಬರು ಯುವಕರು ನೀರಿನಲ್ಲಿ ಈಜಿಕೊಂಡು ಬಚಾವಾಗಿದ್ದರು.
ಚೇತನ್, ಸಂದೀಪ್, ರಾಜು ತೆಪ್ಪ ಮಗುಚಿ ಮೃತಪಟ್ಟಿದ್ದಾರೆ. ಗುರುವಾರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಶ್ವರ್ ಮಲ್ಪೆ ತಂಡ ಯುವಕರ ಮೃತದೇಹ ಹೊರತೆಗೆದಿದ್ದಾರೆ.
ಮರಣೋತ್ತರ ಶವ ಪರೀಕ್ಷೆಗೆ ಸಾಗರದ ಸರಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.