Trending

ಶಿವಮೊಗ್ಗ : ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ

Spread the love

ಶಿವಮೊಗ್ಗ : ಪೌತಿ ಖಾತೆ ಮಾಡಿಕೊಡಲು ವ್ಯಕ್ತಿ ಒಬ್ಬರ ಬಳಿ ಗ್ರಾಮ ಲೆಕ್ಕೀಗ 25,000 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬೆಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕಸಬಾ ಹೋಬಳಿಯಲ್ಲಿ ನಡೆದಿದೆ.

ಶಿವಮೊಗ್ಗ ಕಸಬಾ ಹೋಬಳಿ ಗ್ರಾಮ ಲೆಕ್ಕಿಗ ಸಂಜಯ್ ಮೋಹಿತ್ 25,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪೌತಿ ಖಾತೆ ಮಾಡಿಕೊಡಲು ಕಿರಣ್ ಎಂಬುವವರಿಂದ 25 ಸಾವಿರ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಅವರನ್ನು ಹಿಡಿದಿದ್ದಾರೆ. ಅಗಸವಳ್ಳಿ ಬಳಿ ಇರುವ 2 ಎಕರೆ ಜಮೀನು ಕಿರಣ್ ಅಜ್ಜನ ಹೆಸರಿನಲ್ಲಿ ಇತ್ತು. ಅಜ್ಜನ ಹೆಸರಿನಿಂದ ಅಜ್ಜಿಯ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಕಿರಣ್ ಅರ್ಜಿ ಸಲ್ಲಿಸಿದ್ದರು.

ಪೌತಿ ಖಾತೆ ಮಾಡಿಕೊಡಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಪೌತಿ ಖಾತೆ ಮಾಡಿಕೊಡಲು ವಿಎ 25,000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಲಂಚ ಸ್ವೀಕರಿಸುವವ ವೇಳೆ ಶಿವಮೊಗ್ಗ ಕಸಬಾ ಹೋಬಳಿ ಕಂದಾಯ ಇಲಾಖೆ ಕಚೇರಿಯಲ್ಲಿ ಸಂಜಯ್ ಮೋಹಿತ್ ಲೋಕಾಯುಕ್ತ ಬಲೆಗೆ ಬಲೆಗೆ ಬಿದ್ದಿದ್ದಾರೆ.ಸದ್ಯ ಸಂಜಯ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

 

[pj-news-ticker]