Breaking
Mon. Oct 14th, 2024

ಮಾಜಿ ಉಪ ಪ್ರಧಾನಿ, ‘ಬಿಜೆಪಿಯ ಭೀಷ್ಮ’ ಎಲ್ ಕೆ ಅಡ್ವಾಣಿಯವರಿಗೆ ‘ಭಾರತ ರತ್ನ’ ಘೋಷಣೆ: ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ

By Mooka Nayaka News Feb 3, 2024
Spread the love

ನವದೆಹಲಿ: ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಘೋಷಣೆ ಮಾಡಲಾಗಿದೆ.

ಈ ವಿಷಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಎಲ್ ಕೆ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ನೀಡುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ. ಈ ಕುರಿತು ಅವರೊಂದಿಗೆ ದೂರವಾಣಿ ಮೂಲಕ ಅವರಿಗೆ ನಾನೇ ಖುದ್ದಾಗಿ ತಿಳಿಸಿದ್ದು ಅದನ್ನು ಕೇಳಿ ಅವರು ಬಹಳ ಖುಷಿಪಟ್ಟರು ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

ಕಳೆದ ತಿಂಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡಿತು. ರಾಮ ಮಂದಿರ ಹೋರಾಟದ ರೂವಾರಿ, ಬಿಜೆಪಿ ಭೀಷ್ಮ ಎಂದೇ ಜನಪ್ರಿಯರು ಅಡ್ವಾಣಿಯವರು. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡ ಬೆನ್ನಲ್ಲೇ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಣೆ ಮಾಡಲಾಗಿತ್ತು. ಅದಾದ ಒಂದೇ ವಾರದಲ್ಲಿ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಘೋಷಣೆಯಾಗಿದೆ. 

ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ 2002 ರಿಂದ 2004 ರವರೆಗೆ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ದಕ್ಕೂ ಮೊದಲು ಕೇಂದ್ರ ಗೃಹ ಖಾತೆ ಸೇರಿದಂತೆ ಹಲವು ಸಚಿವಾಲಯಗಳ ಮುಖ್ಯಸ್ಥರಾಗಿದ್ದರು. 1970 ಮತ್ತು 2019 ರ ನಡುವೆ ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿದ್ದರು. 

Related Post