ಬೆಂಗಳೂರು : ಮೈತ್ರಿ ಪಾಲನೆ ವಿಚಾರವಾಗಿ ನನ್ನ ವರ್ಚಸ್ಸು ಹಾಳು ಮಾಡಲು ಕೆಲ ಬಿಜೆಪಿ ನಾಯಕರ ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ಮೇಲೆ ಗರಂ ಆಗಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರ ಜೊತೆ ಕೆಲ ಬಿಜೆಪಿಗರು ಸೇರಿಕೊಂಡಿದ್ದಾರೆ. ಇದಕ್ಕೆ ನಾನು ಆಸ್ಪದ ಕೊಡಲ್ಲ. ಈ ವಿಚಾರವಾಗಿ ಡಿ.ಕೆ.ಶಿವಕುಮಾರ್ ಅವರನ್ನು 2-3 ಬಾರಿ ಭೇಟಿ ಆಗಿದ್ದಾರೆ. ಪಕ್ಕದ ಕ್ಷೇತ್ರದ ಶಾಸಕರ ಜೊತೆಗೂ ಸಂಪರ್ಕದಲ್ಲಿ ಇದ್ದಾರೆ. ಇದೆಲ್ಲವೂ ಚರ್ಚೆ ನಡೀತಿದೆ. ಒಟ್ಟಾರೆ ಕುಮಾರಸ್ವಾಮಿ ಹೆಸರು ಹಾಳು ಮಾಡಬೇಕು. ಬಿಜೆಪಿ ವರಿಷ್ಠರ ಜೊತೆಗೆ ಸಂಬಂಧ ಹಾಳು ಮಾಡುವ ಕೆಲಸವಾಗುತ್ತಿದ್ದು, ಅದಕ್ಕೆ ನಾನು ಯಾಕೆ ಬಲಿ ಆಗಬೇಕು ಎಂದಿದ್ದಾರೆ.
