Trending

ತೀರ್ಥಹಳ್ಳಿ: ಕೆಲಸ ಮಾಡುವಾಗ ತಲೆ ಮೇಲೆ ಬಿದ್ದ ಮರದ ದಿಮ್ಮಿ : ಓರ್ವ ವ್ಯಕ್ತಿ ಸಾವು

Spread the love

ತೀರ್ಥಹಳ್ಳಿ: ಟಿಂಬರ್ ಲೋಡ್ ಕೆಲಸಕ್ಕೆಂದು ಹೋಗಿದ್ದ ವೇಳೆ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವಾಗ ಕಾಲು ಜಾರಿ ಬಿದ್ದ ಕಾರಣ ಮರದ ದಿಮ್ಮಿ ಮೈಮೇಲೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸವಾನಿಯಲ್ಲಿ ಮಂಗಳವಾರ ನಡೆದಿದೆ.

ಯೋಗೇಂದ್ರ (52 ವ) ಮೃತಪಟ್ಟ ದುರ್ದೈವಿ.

ದೇವಂಗಿ ಗ್ರಾಮದ ವ್ಯಕ್ತಿಯೊಬ್ಬರು ಟಿಂಬರ್ ಲೋಡ್ ಮಾಡಲು ಹೇಳಿದ್ದ ಕಾರಣ ಬಸವಾನಿ ಗ್ರಾಮದ ಜ್ಯೋತಿಸರ ಎಂಬಲ್ಲಿಗೆ ಯೋಗೇಂದ್ರ ಸೇರಿ ನಾಲ್ವರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವಾಗ ಯೋಗೇಂದ್ರ ಎಂಬವರ ಕಾಲು ಜಾರಿ ಬಿದ್ದ ಪರಿಣಾಮ ಮರದ ದಿಮ್ಮಿ ಅವರ ತಲೆ ಹಾಗೂ ಮೂಗಿಗೆ ಬಲವಾಗಿ ಬಡಿದು ರಕ್ತಸ್ರಾವವಾಗಿತ್ತು.

ತಕ್ಷಣವೇ ಅವರ ಸ್ನೇಹಿತರು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಕೂಲಿ ಕೆಲಸಕ್ಕೆಂದು ಪರಸ್ಥಳದಿಂದ ಕರೆಸಿ ಭಾರವಾದ ಮರದ ದಿಮ್ಮಿಗಳನ್ನು ಮೇಲಿನಿಂದ ತಂದು ಕೆಳಗೆ ಹಾಕಲು ಒತ್ತಾಯಪಡಿಸಿದ್ದು, ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿ ನನ್ನ ತಮ್ಮ ಯೋಗೇಂದ್ರ ಅವರ ಸಾವಿಗೆ ಕಾರಣನಾದ ಟಿಂಬರ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯೋಗೇಂದ್ರ ಅವರ ಸಹೋದರ ದೂರು ನೀಡಿದ್ದಾರೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.

[pj-news-ticker]