Trending

ಶಿವಮೊಗ್ಗ : ಜೈಲಿನಿಂದ ಮೊಬೈಲ್‌ ಬಳಸಿ ಪತ್ನಿಗೆ ಬೆದರಿಕೆ ಹಾಕಿದ ಕೈದಿ!

Spread the love

ಶಿವಮೊಗ್ಗ:ಜೈಲಿನಲ್ಲಿ ಈಗಲೂ ಮೊಬೈಲ್‌ ಸಿಗುತ್ತದೆ ಎಂಬ ಆರೋಪಗಳಿಗೆ ಮತ್ತೊಂದು ಪ್ರಕರಣ ಪುಷ್ಠಿ ನೀಡಿದ್ದು, ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ತನ್ನ ಪತಿ ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದು ಹಣಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ.

ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಜೈಲಿನಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿರುವ ಕೈದಿ ನಾಗರಾಜ ತನ್ನ ಪತ್ನಿಗೆ ಜೈಲಿನಿಂದಲೇ ಕರೆ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

2024ರ ಮಾರ್ಚ್‌ ತಿಂಗಳಿಂದ ಹಲವು ಬಾರಿ ಕರೆ ಮಾಡಿ ಒಂದು ಸಾವಿರ, ಎರಡು ಸಾವಿರದಂತೆ ಹಣ ಹಾಕುವಂತೆ ಒತ್ತಾಯಿಸುತ್ತಿದ್ದಾನೆ.

ಹಣ ಹಾಕದಿದ್ದಲ್ಲಿ ಜೈಲಿನಿಂದ ಹೊರ ಬಂದ ನಂತರ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಆತನ ಪತ್ನಿ ದೂರು ನೀಡಿದ್ದಾರೆ. ಆರೋಪ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

[pj-news-ticker]