Trending

ಶಿವಮೊಗ್ಗ : ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಬೈಕ್ ಸಹಿತ ಕೊಚ್ಚಿ ಹೋದ ವ್ಯಕ್ತಿ

Spread the love

ಶಿವಮೊಗ್ಗ: ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳ ದಾಟಲು ಹೋಗಿ ವ್ಯಕ್ತಿಯೋರ್ವ ಬೈಕ್ ಸಮೇತ ಕೊಚ್ಚಿ ಹೋಗಿರುವ ಘಟನೆ ಶಿವಮೊಗ್ಗ ತಾಲೂಕಿನ ಮುದುವಾಳ ಗ್ರಾಮದ ಕೊಡಂಜಿ ಹಳ್ಳದಲ್ಲಿ ನಡೆದಿದೆ.

ನಾಪತ್ತೆಯಾಗಿರುವ ವ್ಯಕ್ತಿಯನ್ನು ಚಿನ್ನಿ ಕಟ್ಟೆಯ ಇಕ್ಬಾಲ್ ಎನ್ನಲಾಗಿದೆ.

ಇಕ್ಬಾಲ್ ಅವರು ಮಂಗಳವಾರ ರಾತ್ರಿ ಶಿವಮೊಗ್ಗದಿಂದ ಮುದುವಾಲಾ ಮಾರ್ಗವಾಗಿ ಚಿನ್ನಿಕಟ್ಟೆಗೆ ತೆರಳುತ್ತಿದ್ದ ವೇಳೆ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಮುಂದಾಗಿದ್ದಾರೆ ಆದರೆ ನೀರಿನ ಸೆಳೆತ ಹೆಚ್ಚಾಗಿದ್ದ ಪರಿಣಾಮ ಇಕ್ಬಾಲ್ ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ.

ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿದೆ ಆದರೆ ಇದುವರೆಗೂ ಇಕ್ಬಾಲ್ ಪತ್ತೆ ಆಗಿಲ್ಲ ಎನ್ನಲಾಗಿದೆ. ಸ್ಥಳೀಯರು, ಅಗ್ನಿಶಾಮಕ ಸಿಬಂದಿ ಸೇರಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

[pj-news-ticker]