ಚೆನ್ನೈ: ಕಾಲಿವುಡ್ ನಟ ರಜಿನಿಕಾಂತ್ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ತಡರಾತ್ರಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ರಜಿನಿಕಾಂತ್ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದೆ ಎಂದು ವರದಿ ಆಗಿದೆ.
ಮೂಲಗಳ ಪ್ರಕಾರ ಮಂಗಳವಾರ(ಅ.1ರಂದು) ರಜಿನಿಕಾಂತ್ ಅವರಿಗೆ ಹೃದಯ ಸಂಬಂಧಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸದ್ಯ ಅವರ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಆದರೆ ಇದುವರೆಗೆ ಆಸ್ಪತ್ರೆ ಅಥವಾ ಕುಟುಂಬದವರಿಂದ ಅಧಿಕೃತ ಹೇಳಿಕೆ ಬಂದಿಲ್ಲ. ಆ ಕಾರಣದಿಂದ ರಜಿನಿ ಅಭಿಮಾನಿಗಳು ಆತಂಕದಲ್ಲಿದ್ದಾರೆ.
ದಶಕದ ಹಿಂದೆ ಸೂಪರ್‌ಸ್ಟಾರ್ ಸಿಂಗಾಪುರದಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ರಾಜಕೀಯ ರಂಗಕ್ಕೆ ಪ್ರವೇಶ ಪಡೆಯುವ ನಿರ್ಧಾರದಲ್ಲಿದ್ದ ಅವರು ಆರೋಗ್ಯ ಸಮಸ್ಯೆಯ ಕಾರಣ ಕೊಟ್ಟು ರಾಜಕೀಯದಿಂದ ದೂರ ಉಳಿದಿದ್ದಾರೆ.
ರಜಿನಿಕಾಂತ್ ಅವರಿಗೆ ವಯಸ್ಸು 79 ಆದರೂ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ಅವರ ʼ ವೆಟ್ಟಯ್ಯನ್ʼ ಇದೇ ಅ.10ಕ್ಕೆ ರಿಲೀಸ್ ಆಗಲಿದೆ. ಆ ಬಳಿಕ ʼಕೂಲಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.