ತೀರ್ಥಹಳ್ಳಿ : ಹಾಸ್ಟೆಲ್ ಮಕ್ಕಳ ಊಟದಲ್ಲಿ ಹುಳ ಪ್ರತ್ಯಕ್ಷವಾಗಿದ್ದು ಅದನ್ನು ನೋಡಿದ ಮಕ್ಕಳು ಊಟವನ್ನು ಚೆಲ್ಲಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಪಟ್ಟಣದ ಜೂನಿಯರ್ ಕಾಲೇಜು ಸಮೀಪದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿ ಪರ ಬಾಲಕರ ವಿದ್ಯಾರ್ಥಿ ನಿಲಯದ ಹಾಸ್ಟೆಲ್ ನಲ್ಲಿ ಬುಧವಾರ ರಾತ್ರಿ ಊಟಕ್ಕೆ ಕುಳಿತ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ಸಾಂಬಾರ್ ನಲ್ಲಿ ಹುಳ ಕಂಡಿವೆ. ತಕ್ಷಣ ಅಲ್ಲಿನ ವಾರ್ಡನ್ ಬಳಿ ಮಾಹಿತಿ ನೀಡಿ ಊಟವನ್ನು ಮಾಡದೆ 70 ಜನ ಮಕ್ಕಳು ಊಟ ಚೆಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸರ್ಕಾರ ನೀಡಿದ್ದ ಅಕ್ಕಿಯಲ್ಲಿ ಹುಳ ಆಗಿತ್ತಾ? ಅಥವಾ ಅದನ್ನು ಅಡುಗೆ ಮಾಡುವ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳು ಗಮನಿಸಲಿಲ್ಲವೇ? ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕಾದ ಅಲ್ಲಿನ ಸಿಬ್ಬಂದಿಗಳು ನಿರ್ಲಕ್ಷ್ಯತನ ತೋರಿಸಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ.
ಸೊಪ್ಪಿನ ಸಾಂಬಾರ್ ನಲ್ಲೂ ಹುಳ ಇತ್ತು ಎಂದು ಹೇಳಲಾಗುತ್ತಿದ್ದು, ನಿನ್ನೆ ಬೆಂಡೆಕಾಯಿ ಸಾಂಬಾರ್ ನಲ್ಲೂ ಹುಳ ಕಂಡಿದೆ. ಸುಮಾರು 70 ಕ್ಕೂ ಹೆಚ್ಚು ಮಕ್ಕಳು ಬುಧವಾರ ಹಾಸ್ಟೆಲ್ ನಲ್ಲಿ ಇದ್ದು ಮಕ್ಕಳ ಆರೋಗ್ಯವನ್ನು ಲೆಕ್ಕಿಸದೆ ಈ ರೀತಿ ನಿರ್ಲಕ್ಷ್ಯತನ ವಹಿಸಿರುವುದು ಸರಿಯಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸಂಬಂಧ ಪಟ್ಟ ಅಧಿಕಾರಿಗಳಾದ ಆಶಾಲತಾರವರು ತಕ್ಷಣ ಸ್ಥಳಕ್ಕೆ ಭೇಟಿ ಮಾಡಿ ಕ್ರಮ ಗೊಂಡಿದ್ದಾರೆ.