Breaking
Tue. Oct 8th, 2024

ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲಕ ನಿರಂಜನ್ : `ಕಣ್ಣು ದಾನ’ ಮಾಡಿದ ಪೋಷಕರು

By Mooka Nayaka News Sep 23, 2024
Spread the love

ಬೆಂಗಳೂರು: ಬಿಬಿಎಂಪಿ ಆಟದ ಮೈದಾನದ ಗೇಟ್ ಮುರಿದು ಬಿದ್ದು ಬಾಲಕ ಸಾವನ್ನಪ್ಪಿದ್ದು, ಸಾವಿನ ನೋವಿನಲ್ಲಿ ಬಾಲಕನ ಪೋಷಕರು ಕಣ್ಣು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಬಾಲಕ ನಿರಂಜನ್ ತಂದೆ ವಿಜಯ್, ಮೃತ ನಿರಂಜನ್ ಕಣ್ಣುಗಳನ್ನು ಲಯನ್ಸ್ ಇಂಟರ್‌ನ್ಯಾಷನಲ್‌ ಐ ಬ್ಯಾಂಕ್‌ಗೆ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವಂತ ಬಿಬಿಎಂಪಿ ಆಟದ ಮೈದಾನಕ್ಕೆ ನಿನ್ನೆ ಒಬ್ಬನೇ ಆಟವಾಡುವುದಕ್ಕೆ 10 ವರ್ಷದ ಬಾಲಕ ನಿರಂಜನ್ ತೆರಳಿದ್ದನು. ಬಿಬಿಎಂಪಿ ಮೈದಾನಕ್ಕೆ ಅಳವಡಿಸಿದ್ದಂತ ಗೇಟ್ ತೆಗೆಯುವಾಗ ಮುರಿದು ಬಾಲಕನ ಮೇಲೆಯೇ ಬಿದ್ದಿದೆ. ಬಿಬಿಎಂಪಿ ಆಟದ ಮೈದಾನದ ಗೇಟ್ ಮುರಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಂತ 10 ವರ್ಷದ ಬಾಲಕ ನಿರಂಜನ್ ಅನ್ನು ಸಮೀಪದ ಕೆಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಮಲ್ಲೇಶ್ವರಂ ಆಟದ ಮೈದಾನದ ಗೇಟ್ ತುಕ್ಕು ಹಿಡಿದು ಹಾಳಾಗಿದ್ದರೂ ದುರಸ್ಥಿ ಮಾಡದೇ ಹಾಗೇ ಬಿಟ್ಟಿದ್ದಂತ ಬಿಬಿಎಂಪಿ ನಿರ್ಲಕ್ಷ್ಯದಿಂದಲೇ ಬಾಲಕ ನಿರಂಜನ್ ಸಾವನ್ನಪ್ಪಿರುವುದಾಗಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಮಲ್ಲೇಶ್ವರಂ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

Related Post