ಬೆಂಗಳೂರು: ನಗರದ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದಂತ ದೆಹಲಿಯ ಶ್ರದ್ಧಾ ವಾಕರ್ ಮಾದರಿಯ ಮಹಾಲಕ್ಷ್ಮೀ ಮರ್ಡರ್ ಮಿಸ್ಟರಿ ಬೆಚ್ಚಿ ಬೀಳಿಸುವಂತಿದೆ. ಕೇವಲ ಸಿಂಗಲ್ ಡೋರ್ ಫ್ರಿಡ್ಜ್ ನಲ್ಲಿ ತುಂಡರಿಸಿದಂತ ದೇಹದ 50 ಪೀಸ್ ಗಳನ್ನು ಜೋಡಿಸಿಟ್ಟಿದ್ದನ್ನು ಕಂಡ ಪೊಲೀಸರು, ಕುಟುಂಬಸ್ಥರೇ ಶಾಕ್ ಆಗಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಮಹಾಲಕ್ಷ್ಮೀ ಎಂಬುವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ, ಆಕೆಯ ದೇಹವನ್ನು ಮೂರು ತುಂಡುಗಳನ್ನಾಗಿ ಮಾಡಿ, ಫ್ರಿಡ್ಜ್ ನಲ್ಲಿ ಅಡಗಿಸಿಟ್ಟಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಕುಟುಂಬಸ್ಥರು ಭೇಟಿ ನೀಡಿದಾಗ ಫ್ರಿಡ್ಜ್ ನಲ್ಲಿದ್ದಂತ 50 ಪೀಸ್ ಪೀಸ್ ಮೃತ ದೇಹವನ್ನು ಕಂಡು ಶಾಕ್ ಆಗಿದ್ದಾರೆ.
ಸಿಂಗಲ್ ಡೋರ್ ಫ್ರಿಡ್ಜ್ ನಲ್ಲಿ 50 ಪೀಸ್ ಹಡಗಿಸಿಟ್ಟಿದ್ದಂತ ಹಂತಕರು
ಮಹಾಲಕ್ಷ್ಮಿ ಕೊಲೆ ಮಾಡಿರುವಂತ ಹಂತಕರು, ದೇಹವನ್ನು ಮೂರು ಭಾಗವಾಗಿ ಕತ್ತರಿಸಿ, 50 ಪೀಸ್ ಪೀಸ್ ಮಾಡಿ, ಸಿಂಗಲ್ ಡೋರ್ ಫ್ರಿಡ್ಜ್ ನಲ್ಲಿ ಹುದುಗಿಸಿಟ್ಟಿದ್ದಾರೆ. ಅದನ್ನು ಕಂಡ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಮೊದಲ ಹಂತದ ಫ್ರಿಡ್ಜ್ ನಲ್ಲಿ ಕೈ ಕಾಲು, ಎದೆ ಮೂಳೆಯನ್ನು ಇರಿಸಿದ್ದರೇ, ಮಧ್ಯದ ಹಂತದಲ್ಲಿ ಕಾಲಿನ ಮೂಳೆ, ಮಾಂಸದ ಪೀಸ್ ಗಳನ್ನು ಇಟ್ಟಿದ್ದರಂತೆ. ಕೊನೆಯ ಹಂತದಲ್ಲಿ ಪಾತ್ರೆಯಲ್ಲಿ ಮಹಾಲಕ್ಷ್ಮಿ ತಲೆಯನ್ನು ಇಟ್ಟಿದ್ದಾರಂತೆ.
ಇನ್ನೂ ಕಪ್ಪು ಕವರ್ ನಲ್ಲಿ ಕರುಳು, ಲಿವರ್ ಗಳನ್ನು ಕಟ್ಟಿ ಫ್ರಿಡ್ಜ್ ನಲ್ಲಿ ಹಂತ ಹಂತವಾಗಿ ಸಂಪೂರ್ಣ ಜಾಗವೇ ಇಲ್ಲದಂತೆ ಮಹಾಲಕ್ಷ್ಮಿ ದೇಹವನ್ನು ಇರಿಸಿದ್ದರಂತೆ. ಈಗ ಬೌರಿಂಗ್ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ವೈದ್ಯರೇ ಈ ಪೀಸ್ ಪೀಸ್ ದೇಹವನ್ನು ಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸೋದು ಹೇಗೆ ಎನ್ನುವ ಚಿಂತೆಗೆ ಒಳಗಾಗಿದ್ದಾರೆ.