ಶಿವಮೊಗ್ಗ: ಹಿಂದೂ ಸಮಾಜದ ಜೊತೆ ಮುಸ್ಲಿಂ, ಕ್ರಿಶ್ಚಿಯನ್ನರು ಹೊಂದಿಕೊಳ್ಳಬೇಕು. ತಿರುಪತಿ ಲಡ್ಡಿನಲ್ಲಿ ಕೊಬ್ಬು ವಿಚಾರ ಕೇಳಿ ಆಶ್ಚರ್ಯವಾಯ್ತು. ತಿರುಪತಿ ತಿಮ್ಮಪ್ಪನ ಲಡ್ಡಿನಲ್ಲಿ ಭಕ್ತಿ ತುಂಬಿರುತ್ತದೆ. ಗೋಮಾತೆಯ ಕೊಬ್ಬು ಸೇರಿಸಿ ತಯಾರು ಮಾಡುತ್ತಿರುವುದು ತುಂಬಾ ನೋವಾಯ್ತು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈಗಾಗಲೇ ತನಿಖೆ ಮಾಡಿದ್ದಾರೆ. ಈಗಾಗಲೇ ಈ ಬಗ್ಗೆ ವರದಿ ಕೊಟ್ಟಿದ್ದಾರೆ. ದ್ವೇಷ ಸಾಧನೆ ಮಾಡುವುದಕ್ಕೆ ಈ ವಿಚಾರದಲ್ಲಿ ಹೋಗಬಾರದು. ಜಗನ್ ಮೋಹನ್ ರೆಡ್ಡಿ ಸರ್ಕಾರವಿದ್ದಾಗ ಈ ರೀತಿ ಮಾಡಿದ್ದಾರೆ. ಇಡೀ ಪ್ರಪಂಚದಲ್ಲಿರುವ ಹಿಂದೂಗಳಿಗೆ ನೋವುಂಟು ಮಾಡಿದೆ. ಲಡ್ಡು ತಯಾರಿಕೆಯಲ್ಲಿ ಮೀನಿನ ಎಣ್ಣೆ, ಗೋವಿನ ಕೊಬ್ಬು, ಹಂದಿ ಕೊಬ್ಬು ಬಳಸಿದ್ದಾರೆ. ಮತಾಂತರಗೊಂಡಿರುವ ಜಗನ್ ಮೋಹನ್ ರೆಡ್ಡಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಜಗನ್ ಮೋಹನ್ ರೆಡ್ಡಿ, ಅಧ್ಯಕ್ಷ ಸುಬ್ಬಾರೆಡ್ಡಿಯನ್ನು ಬಂಧಿಸಬೇಕು. ಈ ಪ್ರಕರಣ ಸಿಬಿಐ ತನಿಖೆಯಾಗಬೇಕು. ಯಾರು ಯಾರು ಬೆಂಬಲ ಕೊಟ್ಟಿದ್ದಾರೆ, ಅವರ ಮೇಲೆ ಕ್ರಮ ಆಗಬೇಕು. ಇದನ್ನು ಹಿಂದೂ ಸಮಾಜ ಒಪ್ಪಲ್ಲ. ಇದು ಅಪ್ರತ್ಯಕ್ಷ ವಾಗಿ ವಿಷ ಕೊಟ್ಟಿರುವ ಕೆಲಸ. ವೈಎಸ್ಆರ್ ಪಕ್ಷದ ಜಗನ್ ಮೋಹನ್ ರೆಡ್ಡಿ ವಿರುದ್ಧ ಎಫ್ಐಆರ್ ಹಾಕಬೇಕು. ಪುಣ್ಯ ಸರ್ಕಾರ ಬದಲಾಯಿತು. ಇಲ್ಲದಿದ್ದರೆ ಈ ವಿಚಾರ ಹೊರಗೆ ಬರುತ್ತಿರಲಿಲ್ಲ. ತಿರುಪತಿ ತಿಮ್ಮಪ್ಪ ಭಕ್ತರಿಗೆ ಬಹಳ ನೋವಾಗಿದೆ. ಕೇಂದ್ರ ಸರ್ಕಾರ ಸಿಬಿಐ ತನಿಖೆ ಮೂಲಕ ಸತ್ಯವನ್ನು ಬಯಲು ಮಾಡಬೇಕು ಎಂದು ಆಗ್ರಹಿಸಿದರು.
ಜನರು ತಿರುಪತಿ ಹೋಗಬಾರದು ಎಂದುಕೊಂಡರೆ ಹಿಂದೂ ಸಮಾಜ ಸತ್ತುಹೋಗಿದೆ ಎಂದರ್ಥ. ಈ ವಿಚಾರ ಕೇಳಿ ನಮ್ಗು ತುಂಬಾ ನೋವು ತಂದಿದೆ. ತಪಿಸ್ಥರಿಗೆ ಶಿಕ್ಷೆಯಾಗಬೇಕು. ಯಾವ್ಯಾವ ಸಂಸ್ಥೆ ಇವೆ ಎಂಬುದು ತನಿಖೆಯಿಂದ ಹೊರಬರಬೇಕು. ತಿರುಪತಿ ಲಡ್ಡಿನ ಬಗ್ಗೆ ಪ್ರಪಂಚದಲ್ಲಿ ಗೌರವವಿದೆ. ಚಂದ್ರಬಾಬು ನಾಯ್ಡು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಚಂದ್ರಶೇಖರ್ ಪತ್ನಿ ಕವಿತಾ ಅವರಿಗೆ ಸಿಎಂ ಕಚೇರಿಯಿಂದ ಕರೆ ಬಂದಿದೆ. ಕವಿತಾ ಅವರಿಗೆ ನೌಕರಿ ಕೊಡುತ್ತೇವೆಂದು ಹೇಳಿದ್ದಾರೆ. ಇದು ತುಂಬಾ ಸಂತೋಷದ ವಿಚಾರ ಎಂದರು.