ಆಗುಂಬೆ: ಉಡುಪಿಯಿಂದ ಶಿವಮೊಗ್ಗದತ್ತ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಒಂದು ಬದಿಯ ಚಕ್ರ ಏಕಾಏಕಿ ಕಳಚಿಕೊಂಡ ಘಟನೆ ಆಗುಂಬೆ ಗ್ರಾಮ ಪಂಚಾಯಿತಿ ಸಮೀಪ ಬೆಳಗಿನ ವೇಳೆ ನಡೆದಿದೆ.
ಆಗುಂಬೆ ಬಸ್ ನಿಲ್ದಾಣದ ಸಮೀಪದ ಪಂಚಾಯಿತಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಬಸ್ ನಿಧಾನಗತಿಯಲ್ಲಿ ಸಂಚರಿಸುತ್ತಿದ್ದ ವೇಳೆ ಮತ್ತಷ್ಟು ನಿಧಾನಗೊಳಿಸುವ ಸಂದರ್ಭದಲ್ಲಿ ಚಕ್ರ ಕಳಚಿಕೊಂಡಿದೆ ಎಂದು ತಿಳಿದುಬಂದಿದೆ.
ಬಸ್ ನಿಧಾನಗತಿಯಲ್ಲಿದ್ದ ಕಾರಣ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
