Trending

ಶಿವಮೊಗ್ಗ : ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ; ಸವಾರ ಸಾವು

Spread the love

ಶಿವಮೊಗ್ಗ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಜಿಲ್ಲೆಯ ಕಲ್ಲುಕೊಪ್ಪ ಸಮೀಪದ ಗುತ್ತಿಹಳ್ಳ ಬಳಿ ನಡೆದಿದೆ.

ತಾಲೂಕಿನ ಸಂಪಿಗೆಹಳ್ಳ ನಿವಾಸಿ ಮಂಜುನಾಥ್ ಗದ್ದೆಮನೆ(27) ಮೃತಪಟ್ಟ ದುರ್ದೈವಿ.

ಮಂಜುನಾಥ್ ಡೈರಿಗೆ ಹಾಲು ಹಾಕಿ, ಮನೆಗೆ ಬರುತ್ತಿದ್ದ ವೇಳೆ, ಗುತ್ತಿಹಳ್ಳದಿಂದ ಸಂಪಿಗೆಹಳ್ಳದ ಮನೆಗೆ ಬರುತ್ತಿದ್ದಾಗ, ಆಯನೂರಿನಿಂದ ಬೆಜ್ಜವಳ್ಳಿ ಕಡೆಗೆ ಹೋಗುತ್ತಿದ್ದಾಗ ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ.

ತಕ್ಷಣವೇ ಗಾಯಾಳು ಮಂಜುನಾಥ್‌ ನನ್ನು ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಮಂಜುನಾಥ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮೆಗ್ಗಾನ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇನ್ನೊಂದು ಬೈಕ್ ನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಅವರಿಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಜುನಾಥ್ ಗದ್ದೆಮನೆ ಕಳೆದ ಏಪ್ರಿಲ್ ನಲ್ಲಿ ವಿವಾಹವಾಗಿದ್ದರು. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

[pj-news-ticker]