Breaking
Sun. Sep 8th, 2024

ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ‘ಸಿಎಂ’ ಆಗುತ್ತೇನೆ : ಆರ್.ವಿ ದೇಶಪಾಂಡೆ ಅಚ್ಚರಿಯ ಹೇಳಿಕೆ!

By Mooka Nayaka News Sep 1, 2024
Spread the love

ಮೈಸೂರು : ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಸಿಎಂ ಆಗುತ್ತೇನೆ. ಸಚಿವನಾಗಿ ದಣಿದಿದ್ದೇನೆ. ಇನ್ನೇನಿದರೂ ಸಿಎಂ ಆಗಬೇಕು ಅಷ್ಟೇ ಎಂದು ಮೈಸೂರಲ್ಲಿ ಕಾಂಗ್ರೆಸ್ ನಾಯಕ ಆರ್.ವಿ ದೇಶಪಾಂಡೆ ಅಚ್ಚರಿಯ ಹೇಳಿಕೆಯನ್ನು ನೀಡಿದರು.

ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುತ್ತೇನೆ. ಆದರೆ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ನನಗೆ ಆಸೆ ಇದೆ ನಿಮ್ಮಂತಹ ಜನರಿಗೂ ಕೂಡ ಆಸೆ ಇದೆ .ಸಿಎಂ ಸಿದ್ದರಾಮಯ್ಯಗಿಂತ ನಾನು ಎರಡು ವರ್ಷ ದೊಡ್ಡವನು. ವರಿಷ್ಠರು ಅವಕಾಶಕೊಟ್ಟರು ಸಿಎಂ ಅನುಮತಿ ಕೊಡಬೇಕು. ನಾನು ಸಿದ್ದರಾಮಯ್ಯಗೆ ಒಳ್ಳೆಯ ಸ್ನೇಹಿತ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ.ಈ ಹಿಂದೆ ರಾಮಕೃಷ್ಣ ಹೆಗಡೆ ವಿರುದ್ಧ ಕೂಡ ಫೋನ್ ಟ್ಯಾಪಿಂಗ್ ಆರೋಪ ಬಂದಿತ್ತು. ಆರೋಪ ಬಂದ ಕೂಡಲೇ ರಾಮಕೃಷ್ಣ ಹೆಗಡೆಯವರು ರಾಜೀನಾಮೆ ನೀಡಿದ್ದರು. ಈ ಮೂಲಕ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಆರ್.ವಿ ದೇಶಪಾಂಡೆ ಟಾಂಗ್ ನೀಡಿದರು.

ಈಗ ಪ್ರತಿದಿನ ಫೋನ್ ಟ್ಯಾಪಿಂಗ್ ನಡೆಯುತ್ತದೆ ಪ್ರಸಕ್ತ ದಿನಗಳಲ್ಲಿ ಮೌಲ್ಯಾಧಾರಿತ ರಾಜಕಾರಣ ಇಲ್ಲ. ಮುಡಾ ವಿಚಾರದಲ್ಲಿ ಸಿಎಂ ತಪ್ಪು ಮಾಡಿದರೆ ದಾಖಲೆ ಕೊಡಿ. ಮುಡಾ ವಿಚಾರದಲ್ಲಿ ಕೋಟ್ಯಾಂತರ ಹಗರಣ ನಡೆದಿದೆ ಎನ್ನುತ್ತಾರೆ ದಾಖಲೆ ಇದ್ದರೆ ಕೊಡಿ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

 

 

Related Post