ಧಾರವಾಡ : ಕಳೆದ ಜನೆವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ 19 ಆರೋಪಿಗಳ ಪೈಕಿ 10 ಮಂದಿಗೆ ಇಂದು ಧಾರವಾಡ ಹೈಕೋರ್ಟ್ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.
ಆರೋಪಿಗಳಾದ ಇಮ್ರಾನ್ ಜೇಕಿನಕಟ್ಟಿ (ಎ-5), ರೆಹಾನ್ ವಾಲೀಕಾರ (ಎ-6), ಮುಫೀದ್ ಓಣಿಕೇರಿ (ಎ-9), ಇಬ್ರಾಹಿಂ ಬಂಕಾಪುರ (ಎ-10), ಇಸ್ಮಾಯಿಲ್ ಹುಬ್ಬಳ್ಳಿ (ಎ-12), ನಿಯಾಜ್ ದರ್ಗಾ (ಎ- 14), ಮತ್ತು ಮೊಹಮ್ಮದ್ ಸಾದಿಕ್ ಕುಸನೂರ್ (ಎ-16), ಇಸ್ಮಾಯಿಲ್ ಓಣಿಕೇರಿ (ಎ-17), ಆಸಿಫ ಖಾನ್ ಪಯಾನ್ ಖಾನವರ್ (ಎ-18), ಮುಜಾಮಿಲ್ ಇಮ್ಮುಸಾಬನವರ್ (ಎ-19) ಎಂಬವರಿಗೆ ಜಾಮೀನು ಮಂಜೂರಾಗಿದೆ.
ಜನವರಿ 11ರಂದು ಹಾನಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 19 ಆರೋಪಿಗಳ ಪೈಕಿ 10 ಮಂದಿಗೆ 2 ಲಕ್ಷ ರೂ ಶ್ಯೂರಿಟಿಗಳೊಂದಿಗೆ ಜಾಮೀನು ಮಂಜೂರಾಗಿದೆ.ವಿಚಾರಣೆಗೆ ನಿಯಮಿತವಾಗಿ ಹಾಜರಿರಬೇಕು. ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಹಾಕುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ. ಇನ್ನು, ಪ್ರಕರಣದ 7 ಪ್ರಮುಖ ಆರೋಪಿಗಳಿಗೆ ಜಾಮೀನು ದೊರೆತಿಲ್ಲ.
ಪ್ರಕರಣದ ಹಿನ್ನೆಲೆ?
ಕಳೆದ ಜನೆವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಸಮೀಪದ ಲಾಡ್ಜ್ನಲ್ಲಿ ಜೋಡಿಯೊಂದು ತಂಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೆಲವು ಯುವಕರು ಲಾಡ್ಜ್ಗೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದರು.ಬಳಿಕ ಹೊರಗೆ ಎಳೆದುಕೊಂಡು ಬಂದು ಇಬ್ಬರಿಗೂ ಬೆದರಿಕೆ ಹಾಕಿದ್ದರು.ಹಾನಗಲ್ ಸಮೀಪದ ಅರಣ್ಯ ಪ್ರದೇಶಕ್ಕೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು.ನಂತರ ಸಂತ್ರಸ್ತ ಮಹಿಳೆಯ ಹೇಳಿಕೆಯ ಪ್ರಕಾರ ಜಡ್ಜ್ ಆರೋಪಿಗಳ ಬಂಧನಕ್ಕೆ ಆದೇಶಿಸಿದ್ದರು.