ಹೊಸದಿಲ್ಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿ ಗ್ರಾಂಗೆ ಭಾರತದಲ್ಲಿ ಶೀಘ್ರದಲ್ಲೇ ನಿಷೇಧ ಹೇರುವ ಸಾಧ್ಯತೆಗಳಿವೆ. ಸುಲಿಗೆ ಮತ್ತು ಜೂಜಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪದಲ್ಲಿ ಟೆಲಿಗ್ರಾಂ ವಿರುದ್ಧ ಕೇಂದ್ರ ಸರಕಾರ ತನಿಖೆ ನಡೆಸುತ್ತಿದ್ದು, ಒಂದು ವೇಳೆ ಇದು ಸಾಬೀತಾದರೆ ಟೆಲಿಗ್ರಾಂಗೆ ನಿಷೇಧ ಬೀಳುವ ಸಾಧ್ಯತೆ ಇದೆ.
ಟೆಲಿಗ್ರಾಂ ಸಂಸ್ಥೆಯ ಸಿಇಒ ಪಾವೆಲ್ ದುರೋವ್ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮೋಸ, ಮಾದಕವಸ್ತು ಕಳ್ಳಸಾಗಣೆ, ಸೈಬರ್ ಅಪರಾಧ, ಭಯೋತ್ಪಾದನೆಗೆ ಬೆಂಬಲ ಆರೋಪಗಳಿಗೆ ಸಂಬಂಧಿಸಿದಂತೆ ಪಾವೆಲ್ ಅವರನ್ನು ಬಂಧಿಸ ಲಾಗಿತ್ತು. ಯುಜಿಸಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಸಮಯದಲ್ಲೂ ಸಹ ಟೆಲಿಗ್ರಾಂ ಮೇಲೆ ಸಾಕಷ್ಟು ಆರೋಪ ಕೇಳಿಬಂದಿತ್ತು.