Trending

ಬಾಂಗ್ಲಾದೇಶ : ನಿಲ್ಲದ ಪ್ರತಿಭಟನಾಕಾರರ ಅಟ್ಟಹಾಸ – ಹಸೀನಾ ಪಕ್ಷದ 29 ಮುಖಂಡರ ಶವ ಪತ್ತೆ!

Spread the love

ಢಾಕಾ: ಸ್ವಾತಂತ್ರ್ಯ ಯೋಧರ ಕುಟುಂಬಸ್ಥರಿಗೆ ನೀಡಲಾಗಿರುವ ಶೇ.30ರ ಮೀಸಲಾತಿ ವಿವಾದದ ಕಿಚ್ಚಿನಿಂದಾಗಿ ಬಾಂಗ್ಲಾದೇಶ ಹೊತ್ತಿ ಉರಿದ ಕೆಲವು ವಾರಗಳ ನಂತರ ಪ್ರಧಾನಿ ಹುದ್ದೆಗೆ ಶೇಖ್‌ ಹಸೀನಾ ರಾಜೀನಾಮೆ ಕೊಟ್ಟು ಭಾರತಕ್ಕೆ ಪರಾರಿಯಾದ ಬೆನ್ನಲ್ಲೇ ಅವಾಮಿ ಲೀಗ್‌ ಪಕ್ಷದ ಸುಮಾರು 29 ಮುಖಂಡರ ಶವಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಹಸೀನಾ ರಾಜೀನಾಮೆ ನಂತರವೂ ಮುಂದುವರಿದ ಹಿಂಸಾಚಾರದಲ್ಲಿ ಸತ್‌ ಖಿರಾದಲ್ಲಿ ಕನಿಷ್ಠ 10 ಮಂದಿಯನ್ನು ದಾರುಣವಾಗಿ ಹತ್ಯೆಗೈಯಲಾಗಿದೆ. ಅವಾಮಿ ಲೀಗ್‌ ಮುಖಂಡರ ಮನೆ, ಅಂಗಡಿ, ಮುಂಗಟ್ಟುಗಳನ್ನು ಧ್ವಂಸಗೊಳಿಸಿ ಲೂಟಿ ಮಾಡಲಾಗಿದೆ ಎಂದು ದ ಢಾಕಾ ಟ್ರಿಬ್ಯೂನ್‌ ವರದಿ ಮಾಡಿದೆ.

ಕ್ಯೂಮಿಲ್ಲಾ ಪ್ರದೇಶದಲ್ಲಿ ಪ್ರತಿಭಟನಾಕಾರರ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಅವಾಮಿ ಲೀಗ್‌ ನ ಮಾಜಿ ಕೌನ್ಸಿಲರ್‌ ಮೊಹಮ್ಮದ್‌ ಶಾ ಅಲಾಂ ಅವರ ಮೂರು ಮಹಡಿ ಅಂತಸ್ತಿನ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಈ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಮನೆಯೊಂದರಲ್ಲಿ 5 ಮಕ್ಕಳು ಸೇರಿದಂತೆ 11 ಶವವನ್ನು ಪತ್ತೆ ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ. ಸಂಸದ ಶಫಿಖುಲ್‌ ಇಸ್ಲಾಮ್‌ ಶಿಮುಲ್‌ ಮನೆಗೆ ನುಗ್ಗಿದ ಗುಂಪೊಂದು ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

[pj-news-ticker]