Trending

ಸಾಗರ : ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Spread the love

ಸಾಗರ: ಪಟ್ಟಣದ ಹೊರವಲಯದ ಸೊರಬ ರಸ್ತೆಯಲ್ಲಿರುವ ಗಡದಯ್ಯ ಲೇಔಟ್‌ನಲ್ಲಿ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ನಗರದ ಜೆಪಿ ನಗರ ನಿವಾಸಿಯಾಗಿದ್ದ ಅರುಣ(24) ಎನ್ನುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸೋಮವಾರ ಸಂಜೆಯ ವೇಳೆಗೆ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದ ಅವರು ಸೊರಬ ರಸ್ತೆಯ ಗಡದಯ್ಯ ಲೇಔಟ್‌ಗೆ ಬಂದಿದ್ದಾರೆ. ಲೇಔಟ್‌ನ ಮೂಲೆಯ ಮರದ ಬುಡದಲ್ಲಿ ಬೈಕ್ ನಿಲ್ಲಿಸಿ, ಅದನ್ನು ಏರಿ ಮರಕ್ಕೆ ಹಗ್ಗ ಬಿಗಿದು, ಬೈಕ್ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ಬೆಳಿಗ್ಗೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸೋಮವಾರ ಸಂಜೆ ಅರುಣ್ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

[pj-news-ticker]