Trending

ಸಾಗರ : ಹೆಣ್ಣಿನ ಕಡೆಯವರನ್ನು ಗಾಂಜಾ ಕೇಸಲ್ಲಿ ಸಿಕ್ಕಿಸಲು ಹೋಗಿ ತಾನೇ ಅರೆಸ್ಟ್ ಆದ ಭೂಪ!

Spread the love

ಶಿವಮೊಗ್ಗ: ವೈಯಕ್ತಿಕ ದ್ವೇಷದ ಹಿನ್ನೆಲೆ ಹೆಣ್ಣಿನ ಮನೆಯವರನ್ನು ಗಾಂಜಾ ಕೇಸ್ ನಲ್ಲಿ ಸಿಕ್ಕಿ ಹಾಕಿಸಲು ಹೋದ ಇಂಜಿನಿಯರ್ ಒಬ್ಬ ತಾನೇ ತಗುಲಿ ಹಾಕಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆಯಲ್ಲಿ ವಿಚಿತ್ರ ಘಟನೆ ನಡೆದಿದ್ದು, ಶಾಂತಕುಮಾರ್ ಎಂಬಾತನೇ ಈ ಇಂಜಿನಿಯರ್.

ಜಿತೇಂದ್ರ ಎಂಬುವವರ ಮನೆಗೆ ಹೆಣ್ಣು ನೋಡಲು ಶಾಂತಕುಮಾರ್ ಹೋಗಿದ್ದ. ನಿಶ್ಚಯವಾಗುವ ವೇಳೆ ಮದುವೆ ಮುರಿದು ಬಿದ್ದಿತ್ತು. ನಂತರ ಶಾಂತಕುಮಾರ್ ಹುಡುಗಿಯ ಮನೆಯವರ ಮೇಲೆ ದ್ವೇಷ ಸಾಧಿಸುತ್ತಿದ್ದ. ಇದಕ್ಕಾಗಿ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸೇರಿಕೊಂಡು ಜಿತೇಂದ್ರ ಅವರ ಮನೆಯ ಹಿಂಭಾಗ ಗಾಂಜಾ ಪ್ಯಾಕೆಟ್ ಎಸೆಯುವ ಪ್ಲಾನ್ ಮಾಡಿದ್ದ.

ಸರ್ಕಾರಿ ನೌಕರಿಯಲ್ಲಿದ್ದರೂ ತನ್ನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬೇರೆಯವರ ಮನೆಯ ಒಳಗಡೆ ಗಾಂಜಾ ಪ್ಯಾಕೆಟ್ ಎಸೆದ ಕೃತ್ಯದ ಅಡಿಯಲ್ಲಿ ಅರೆಸ್ಟ್ ಆಗಿದ್ದಾನೆ.

ಆಗಿದ್ದೇನು?

ಮದುವೆಗೆ ಹೆಣ್ಣು ಕೊಡಲಿಲ್ಲ ಎಂಬ ದ್ವೇಷದದಿಂದ ಶಾಂತಕುಮಾರ್ ಹೆಣ್ಣಿನ ಕಡೆಯವರನ್ನ ಸಿಕ್ಕಿಹಾಕಿಸಲು ಪ್ಲಾನ್ ಮಾಡಿದ್ದ. 15 ರಿಂದ 20 ಗ್ರಾಂ ತೂಕವುಳ್ಳ 19 ಗಾಂಜಾ ಪ್ಯಾಕೆಟ್ ಗಳನ್ನು ಮನೆ ಹಿಂಭಾಗ ಎಸೆದು ಸಿಕ್ಕಿಹಾಕಿಸಲು ಸಂಚು ರೂಪಿಸಿದ್ದ. ಇದೇ ತಿಂಗಳ 13 ನೇ ತಾರೀಕು ರಾತ್ರಿ 10 ಗಂಟೆ ವೇಳೆಗೆ ಕಪ್ಪು ಕವರ್ ನಲ್ಲಿ ಗಾಂಜಾ ಪ್ಯಾಕೆಟನ್ನು ತಂದು ಇನ್ನೊಬ್ಬನ ಕೈಯಿಂದ ಹುಡುಗಿ ಕಡೆಯ ಮನೆಯವರ ಹಿಂಭಾಗದಲ್ಲಿ ಎಸೆದು ಹೋಗಿದ್ದ.

ಬಳಿಕ ಶಾಂತಕುಮಾರ್ ನಂತರ ತಾನೇ ಅಬಕಾರಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದ. ವಿಚಾರ ತಿಳಿದ ನಂತರ ಜಿತೇಂದ್ರ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಗಾಂಜಾ ಹುಡುಕಿದ್ದರು. ಆದರೆ ಗಾಂಜಾ ಪ್ಯಾಕೆಟ್ ಗಳು ಮನೆಯ ಹಿಂಬದಿ ಇದ್ದಿದ್ದರಿಂದ ಮನೆಯಲ್ಲಿ ಅಧಿಕಾರಿಗಳಿಗೆ ಸಿಕ್ಕಿರಲಿಲ್ಲ. ಆದರೆ ಬೆಳಗ್ಗೆ ಎದ್ದು ಮನೆಯ ಹಿಂಬದಿ ಸ್ವಚ್ಛಗೊಳಿಸುವಾಗ ಮನೆಯವರ ಕಣ್ಣಿಗೆ ಗಾಂಜಾ ಪ್ಯಾಕೆಟ್ ಬಿದ್ದಿದೆ. ನಂತರ ಸಿಸಿಟಿವಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

[pj-news-ticker]