Trending

ಪೆಟ್ರೋಲ್, ಡೀಸೆಲ್ ಹಾಕಿಸಲು ಗೋವಾದತ್ತ ತೆರಳುತ್ತಿರುವ ಕಾರವಾರ ಜನ, ಸ್ಥಳೀಯ ಬಂಕ್ಗಳಿಗೆ ಸಂಕಷ್ಟ

Spread the love

ಕಾರವಾರ : ನೆರೆಯ ಗೋವಾದಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ದೊರೆಯುತ್ತಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜನ ಅಲ್ಲಿಗೇ ದೌಡಾಯಿಸುತ್ತಿದ್ದಾರೆ. ಇದರಿಂದಾಗಿ ಕಾರವಾರದ ಸ್ಥಳೀಯ ಪೆಟ್ರೋಲ್ ಬಂಕ್ಗಳು ನಷ್ಟ ಅನುಭವಿಸುವಂತಾಗಿದೆ ಎಂದು ವರದಿಯಾಗಿದೆ.

ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಗೋವಾದ ಪೆಟ್ರೋಲ್ ಬಂಕ್ಗಳಿಗೆ ವಾಹನ ಮಾಲೀಕರು ಬರುತ್ತಿದ್ದು, ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ಪ್ರಸ್ತುತ, ಗೋವಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 99 ರೂ. ಇದ್ದು, ಕಾರವಾರದಲ್ಲಿ ಲೀಟರ್‌ಗೆ 104 ರೂ. ಇದೆ. ಗೋವಾದಲ್ಲಿ ಕಾರವಾರಕ್ಕಿಂತ ಪೆಟ್ರೋಲ್ 5 ರೂ. ಅಗ್ಗವಾಗಿದೆ. ಡೀಸೆಲ್ ಸಹ ಗೋವಾದಲ್ಲಿ ರಿಯಾಯಿತಿ ದರದಲ್ಲಿ ಬರುತ್ತದೆ. ಕಾರವಾರದಲ್ಲಿ ಡೀಸೆಲ್ ಲೀಟರ್ಗೆ 90.57 ರೂ. ಇದ್ದರೆ, ಗೋವಾದಲ್ಲಿ ಲೀಟರ್‌ಗೆ 88.07 ರೂ. ಇದೆ.

ಈ ಉಳಿತಾಯದ ಲಾಭ ಪಡೆಯಲು ಟ್ರಕ್ ಚಾಲಕರು ಮತ್ತು ಇತರ ವಾಹನ ಮಾಲೀಕರು 15 ಕಿಮೀ ಸಂಚರಿಸಿ ಗೋವಾಕ್ಕೆ ತೆರಳುತ್ತಿದ್ದಾರೆ. ಗೋವಾ ಗಡಿಯಲ್ಲಿ ಹೆಚ್ಚಿನ ವಾಹನ ಮಾಲೀಕರು ತಮ್ಮ ಟ್ಯಾಂಕ್‌ಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಾರೆ, ಅಲ್ಲಿ ಕಡಿಮೆ ಬೆಲೆ ಇದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇಂಧನ ಬೆಲೆ ಏರಿಕೆಯಾದ ನಂತರ, ಕಾರವಾರದ ಪೆಟ್ರೋಲ್ ಪಂಪ್‌ಗಳು ನಷ್ಟ ಅನುಭವಿಸಿವೆ. ಹೆಚ್ಚಿನ ಗ್ರಾಹಕರು ಗೋವಾ ಗಡಿಗೆ ಹೋಗುತ್ತಾರೆ ಎಂದು ಕಾರವಾರದ ಪೆಟ್ರೋಲ್ ಪಂಪ್‌ನ ನೌಕರರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಗೋವಾ ಗಡಿಯಲ್ಲಿ ವಾಹನಕ್ಕೆ ಪೆಟ್ರೋಲ್ ತುಂಬಿಸಿದರೆ ನಾವು ಲೀಟರ್‌ಗೆ 5 ರೂ.ವರೆಗೆ ಉಳಿಸಬಹುದು. ಕರ್ನಾಟಕದಲ್ಲಿ ಪೆಟ್ರೋಲ್ಗೆ 104.49 ರೂ. ಇದ್ದು, ಗೋವಾದಲ್ಲಿ ನಾವು 11 ಲೀಟರ್ ಪೆಟ್ರೋಲ್ ಖರೀದಿಸಿದರೆ ಒಂದು ಲೀಟರ್ ಉಚಿತವಾಗಿ ಬರುತ್ತದೆ ಎಂದು ವಾಹನ ಮಾಲೀಕರೊಬ್ಬರು ತಿಳಿಸಿದ್ದಾರೆ.

ಕರ್ನಾಟಕದಿಂದ ಹೆಚ್ಚಿನ ವಾಹನ ಮಾಲೀಕರು ಪೆಟ್ರೋಲ್ ಹಾಕಿಸಿಕೊಳ್ಳಲು ಬರುವುದನ್ನು ಗೋವಾದ ಪೆಟ್ರೋಲ್ ಪಂಪ್‌ ಉದ್ಯೋಗಿಯೊಬ್ಬರು ದೃಢಪಡಿಸಿದ್ದಾರೆ.

[pj-news-ticker]