Trending

ತೀರ್ಥಹಳ್ಳಿ : ದೇವಸ್ಥಾನದ ಪೂಜಾ ಸಾಮಗ್ರಿ ಕದ್ದಿದ್ದ ಕಳ್ಳರ ಬಂಧನ!

Spread the love

ತೀರ್ಥಹಳ್ಳಿ: ಮಾಳೂರು ವ್ಯಾಪ್ತಿಯ ಆಂಜನೇಯ ದೇವಸ್ಥಾನ ಗಾಳಿಮಾರಮ್ಮ ದೇವಸ್ಥಾನ ಹಾಗೂ ಬಾಳಗಾರು ಸಮೀಪದ ರಾಮೇಶ್ವರ ದೇವಸ್ಥಾನಗಳಲ್ಲಿ ಘಂಟೆ, ಪೂಜಾಸಾಮಾಗ್ರಿಗಳು ಹಾಗೂ ಬೆಳ್ಳಿಯ ದೀಪಗಳನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಮಾಳೂರು ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೂಜಾ ಸಾಮಾಗ್ರಿ ಕಳ್ಳತನದ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಬೆನ್ನುಹತ್ತಿದ ಪೊಲೀಸರ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರಿಂದ ಅಂದಾಜು ಮೌಲ್ಯ 70 ಸಾವಿರ ರೂಪಾಯಿಗಳ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಎರಡು ಲಕ್ಷ ಮೌಲ್ಯದ ಓಮ್ನಿ ಕಾರನ್ನು ವಶ ಪಡಿಸಿಕೊಂಡಿರುತ್ತಾರೆ.

ಆರೋಪಿಗಳಾದ ಭದ್ರಾವತಿ ಮೂಲದ 26 ವರ್ಷದ ಅರುಣ ಹಾಗೂ 24 ವರ್ಷದ ಆಕಾಶ್ ಎಂಬ ಇವರನ್ನ ಬಂಧಿಸಲಾಗಿದೆ.‌ ಡಿವೈಎಸ್ಪಿ ಗಜಾನನ ವಾಮನ ಸುತಾರ ಹಾಗೂ ಸಿಪಿಐ ಶ್ರೀಧರ್ ರವರ ಮಾರ್ಗದರ್ಶನದಲ್ಲಿ ಬಂಧಿಸಲಾಗಿದೆ.

[pj-news-ticker]