ಶಿವಮೊಗ್ಗ: ಈದ್ಗಾ ಮೈದಾನ ಸಾರ್ವಜನಿಕರ ಆಸ್ತಿ ಎನ್ನುವುದಕ್ಕೆ ಸಾಕಷ್ಟು ಪುರಾವೆ ಕೊಡುವ ಕೆಲಸವಾಗಿದೆ. ಈದ್ಗಾ ಮೈದಾನ ಯಾರದ್ದೋ ಆಸ್ತಿ ಅಲ್ಲ, ಸಾರ್ವಜನಿಕರ ಆಸ್ತಿ. ಇದನ್ನು ಯಾರು ಕಬಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದೇವೆ ಎಂದು ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್ ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ಈದ್ಗಾ ಮೈದಾನ ವಿವಾದ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲಾಧಿಕಾರಿಯವರಿಗೆ ಅವರಿಗೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಆದಷ್ಟು ಬೇಗ ಗೊಂದಲಕ್ಕೆ ಸರಿಯಾದ ಪರಿಹಾರ ಹೇಳಬೇಕು ಎಂದಿದ್ದೇವೆ. ಈ ಹಿಂದೆ ಇದ್ದಹಾಗೇ ಯಥಾಸ್ಥಿತಿಯಲ್ಲಿ ಬಿಟ್ಟುಕೊಡುವಂತೆ ಮನವಿ ಮಾಡಿದ್ದೇವೆ. ನ್ಯಾಯಾಲಯಕ್ಕೂ ಹೋಗುತ್ತೇವೆ, ಅವಶ್ಯಕತೆ ಬಿದ್ದರೆ ಹೋರಾಟ ಸಹ ಮಾಡುತ್ತೇವೆ ಎಂದರು.
50ರ ದಶಕದಿಂದ ನಮ್ಮ ಬಳಿ ಸಾಕಷ್ಟು ದಾಖಲೆಯಿದೆ. ಗ್ರಾಮಠಾಣ ಜಾಗ ಹೇಗೆ ವಕ್ಫ್ ಆಸ್ತಿ ಆಗುತ್ತೆ ಇದರ ಬಗ್ಗೆನು ಗಂಭೀರ ಯೋಚನೆ ಮಾಡಿದ್ದೇವೆ. ಕೆಳದಿ ಅರಸರ ಸಮಾಧಿಯನ್ನು ಸಹ ವಕ್ಪ್ ಆಸ್ತಿ ಎನ್ನುತ್ತಿದ್ದಾರೆ. ಡಿಸಿ, ಎಸ್ಪಿ ಅವರಿಗೆ ಯಥಾಸ್ಥಿತಿ ಕಾಪಾಡುವಂತೆ ಹೇಳಿದ್ದೇವೆ. ಬಿಜೆಪಿ ಸಾರ್ವಜನಿಕರ ಆಸ್ತಿ ಉಳಿಸಲು ಬೀದಿಗಿಳಿದು ಹೋರಾಟ ಮಾಡಲಿದೆ. ಯಾರಪ್ಪನ ಮನೆ ಆಸ್ತಿ ಅಲ್ಲ ಇದು ಸಾರ್ವಜನಿಕರ ಆಸ್ತಿ. ಸರ್ಕಾರದ ಒತ್ತಡದಿಂದ ಹಿಂದಿನ ಪಾಲಿಕೆ ಅಧಿಕಾರಿಗಳು ಕೆಲವು ತಪ್ಪು ಮಾಡಿದ್ದಾರೆ ಎಂದರು.
