Trending

ರಾಜ್ಯದ ಅಧಿಕೃತ ಭಾಷೆಯಾಗಿ ತುಳು, ಕೊಡವ,ಲಂಬಾಣಿ

Spread the love

ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದ್ದು, ಇಲಾಖೆಯಿಂದ ವರದಿ ಪಡೆದ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಕೊಡವ ಮತ್ತು ಲಂಬಾಣಿ ಭಾಷೆಗೂ ಇದೇ ರೀತಿಯ ಕ್ರಮ ಮಾನ್ಯತೆ ಒದಗಿಸಲು ಆಗ್ರಹವಿದ್ದು, ತುಳು, ಕೊಡವ ಹಾಗೂ ಲಂಬಾಣಿ ಮೂರೂ ಭಾಷೆಗಳ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಬಂದ ಅನಂತರ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಈ ಕುರಿತು ಗಮನ ಸೆಳೆದ ಕಾಂಗ್ರೆಸ್‌ನ ಅಶೋಕ್‌ ರೈ, ತುಳು ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, 1994ರಲ್ಲಿ ಕರ್ನಾಟಕದಲ್ಲಿ ತುಳು ಅಕಾಡೆಮಿ ಸ್ಥಾಪನೆಯಾಗಿದ್ದು, ಕಿನಂತರದ ವರ್ಷಗಳಲ್ಲಿ ಕೇರಳ ಸರಕಾರ ಕೂಡ ತುಳು ಅಕಾಡೆಮಿ ಸ್ಥಾಪಿಸಿದೆ. ಗೂಗಲ್‌ 110 ಭಾಷೆಗಳ ಭಾಷಾಂತರಕ್ಕೆ ಅವಕಾಶ ಕೊಟ್ಟಿದ್ದು, ಈ ಪೈಕಿ ತುಳು ಭಾಷೆ ಕೂಡ ಒಂದಾಗಿದೆ.

ಆಂಧ್ರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಲದಲ್ಲಿ ಎರಡು-ಮೂರು ಭಾಷೆಗಳನ್ನು ಆ ರಾಜ್ಯಗಳ ಅಧಿಕೃತ ಭಾಷೆಗಳನ್ನಾಗಿ ಮಾಡಿದೆ. ಶಾಸಕರ ತಂಡ ಸ್ವಂತ ಖರ್ಚಿನಲ್ಲಿ ಬಿಹಾರ ಹಾಗೂ ಪಶ್ಚಿಮ ಬಂಗಾಲಕ್ಕೆ ತೆರಳಿ ಅಧ್ಯಯನ ನಡೆಸಿ, ವರದಿ ಕೊಟ್ಟಿದ್ದೇವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ತುಳು ಭಾಷೆಗೆ ಮಾನ್ಯತೆ ನೀಡಬೇಕು ಎಂದರು.

[pj-news-ticker]