ಬಾಗಲಕೋಟೆ : ಎರಡು ತಲೆ, ನಾಲ್ಕು ಕಾಲುಗಳಿರುವ ಮಕ್ಕಳು ಜನಿಸಿರುವುದನ್ನು ನೋಡಿದ್ದೇವೆ. ಅದರಂತೆ ಇದೀಗ ಅಚ್ಚರಿ ಎಂಬಂತೆ 25 ಬೆರಳುಗಳು ಇರುವ ಅಪರೂಪದ ಮಗುವೊಂದು ಜನನವಾಗಿದೆ.
ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿಗೆ, 12 ಕಾಲ್ಬೆರಳುಗಳು ಹಾಗೂ 13 ಕೈ ಬೆರಳುಗಳಿವೆ. 25 ಬೆರಳಿನ ಮಗು ಕಂಡು ಒಮ್ಮೆ ವೈದ್ಯರೇ ಆಶ್ಚರ್ಯಗೊಂಡಿದ್ದಾರೆ.
ಭಾರತಿ ಕೊಣ್ಣೂರು ( 35) ಎಬುವವರು ಈ ಮಗುವಿಗೆ ಜನ್ಮ ನೀಡಿದ್ದಾರೆ. ಅಚ್ಚರಿಯ ಮಗು ಜನನದ ಹಿನ್ನೆಲೆ ಕುಟುಂಬದಲ್ಲಿ ಹರ್ಷ ಮನೆ ಮಾಡಿದೆ. 25 ಬೆರಳು ಇರುವುದು ಅತ್ಯಂತ ಅಪರೂಪ ಘಟನೆಗಳಲ್ಲೊಂದು. ಬಲಗೈಗೆ 6 ಬೆರಳು ಎಡಗೈಗೆ 7 ಬೆರಳು, ಎರಡು ಕಾಲಿನಲ್ಲಿ 6 ಬೆರಳುಗಳಿವೆ.