Trending

ಶಿವಮೊಗ್ಗ: ವಾಮಾಚಾರ ಮಾಡಿದ ಲಿಂಬೆ ಹಣ್ಣು ಚಲನೆ – ಆತಂಕ

Spread the love

ಶಿವಮೊಗ್ಗ: ನಗರದ ಕಾಶಿಪುರದ ಎರಡನೇ ತಿರುವಿನಲ್ಲಿ ವಾಮಾಚಾರ ಮಾಡಿದ ಲಿಂಬೆ ಹಣ್ಣು ಮತ್ತು ಬೆಲ್ಲದ ಪೊಟ್ಟಣ ಚಲಿಸಿದ ಘಟನೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.

ಬೈಕ್‌ನಲ್ಲಿ ಬಂದ ಮುಸುಕುಧಾರಿ ಒಬ್ಬ ಪುರುಷ ಹಾಗೂ ಮಹಿಳೆ ವಾಮಾಚಾರ ಮಾಡಿದ ನಿಂಬೆಹಣ್ಣು ಹಾಗೂ ಬೆಲ್ಲವನ್ನು ಕಾಶಿಪುರದ ನಿವಾಸಿ ರವಿಕುಮಾರ್ ಹನುಮಂತಪ್ಪ ಎಂಬುವರ ಮನೆ ಮುಂದೆ ಎಸೆದು ಹೋಗಿದ್ದಾರೆ.

ರವಿ ಕುಮಾರ್ ಅವರ ಮಗಳು ತುಳಸಿ ಪೂಜೆ ಮಾಡಲು ಬಂದ ವೇಳೆ ವಾಮಾಚಾರ ಮಾಡಿದ ಬೆಲ್ಲ ಹಾಗೂ ಲಿಂಬೆ ಹಣ್ಣು ಇದ್ದ ಪೊಟ್ಟಣ ಚಲಿಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಮಾಚಾರದ ಪೊಟ್ಟಣ ಚಲಿಸುವ ದೃಶ್ಯ ನೋಡಿ ಮನೆ ಮಂದಿ ಭಯಭೀತರಾಗಿದ್ದಾರೆ.

ದೃಶ್ಯ ನೋಡಿದ ಬಳಿಕ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಮಾಚಾರದ ಕುರಿತು ತನಿಖೆ ನಡೆಸಿ ಕೃತ್ಯ ಎಸಗಿರುವರನ್ನು ಬಂಧಿಸಿ ಕಾನೂನು ರೀತಿ ನ್ಯಾಯ ಕೊಡಿಸಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

[pj-news-ticker]