Breaking
Tue. Jul 16th, 2024

ಆಸ್ಕರ್‌ ವಿಜೇತ ‘ಟೈಟಾನಿಕ್‌ʼ, ʼಅವತಾರ್‌ʼ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ

By Mooka Nayaka News Jul 7, 2024
Spread the love

ನವದೆಹಲಿ: ಹಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ಮಾಪಕ, ಆಸ್ಕರ್‌ ವಿಜೇತ ಜಾನ್ ಲ್ಯಾಂಡೌ(63) ನಿಧನರಾಗಿದ್ದಾರೆ.

ಹಾಲಿವುಡ್‌ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ದೀರ್ಘಾವಧಿಯ ನಿರ್ಮಾಪಕ ಪಾಲುದಾರರಾಗಿದ್ದ ಜಾನ್ ಲ್ಯಾಂಡೌ‌ ಕಳೆದ ಕೆಲ ಸಮಯದಿಂದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಜಾನ್‌ ಲ್ಯಾಂಡೌ: ವಿಶ್ವ ಚಿತ್ರರಂಗದ ದೊಡ್ಡ ಸಿನಿಮಾವೆಂದೇ ಹೇಳಲಾಗುವ ಜೇಮ್ಸ್‌ ಕ್ಯಾಮರೂನ್‌ ಅವರ ʼಟೈಟಾನಿಕ್‌ʼ (Titanic) ಹಾಗೂ ʼಅವತಾರ್‌ʼ (Avatar) ಸಿನಿಮಾಗಳಿಗೆ ಜಾನ್ ಲ್ಯಾಂಡೌ ಸಹ ನಿರ್ಮಾಪಕರಾಗಿದ್ದರು.

ಅವರ ನಿಧನಕ್ಕೆ ಹಾಲಿವುಡ್‌ ನ ಖ್ಯಾತ ಕಲಾವಿದರು ಹಾಗೂ ನಿರ್ದೇಶಕ, ನಿರ್ಮಾಪಕರು ಸಂತಾಪ ಸೂಚಿಸಿದ್ದಾರೆ.

Related Post