Breaking
Tue. Jul 16th, 2024

ತೀರ್ಥಹಳ್ಳಿ : ಕಳ್ಳತನಕ್ಕೆ ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು !

By Mooka Nayaka News Jun 29, 2024
CREATOR: gd-jpeg v1.0 (using IJG JPEG v80), default quality?
Spread the love

ತೀರ್ಥಹಳ್ಳಿ: ತಾಲೂಕಿನ ಮೇಲಿನಕುರುವಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾನಿ ಸಮೀಪ ಮನೆಯೊಂದರ ಬೀಗ ಒಡೆದು ಕಳ್ಳತನ ಮಾಡಲು ಪ್ರಯತ್ನಪಟ್ಟ ಕಳ್ಳನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡಲು ಮೂವರು ಬಂದು ಮೇಲಿನ ಕುರುವಳ್ಳಿ ಮೇಳಿಗೆ ರಸ್ತೆಯ ನೀರಿನ ಟ್ಯಾಂಕ್ ಸಮೀಪ ಕಳ್ಳತನಕ್ಕೆ ಯತ್ನಿಸಿದ್ದಾರೆ.

ದೇವಯ್ಯ ಎಂಬವರ ಕುಟುಂಬದವರು ಮನೆಗೆ ಬೀಗ ಹಾಕಿ ಕಾಶಿಯಾತ್ರೆಗೆ ಹೋಗಿರುವ ವಿಷಯ ತಿಳಿದು ಕಳ್ಳರು ಮನೆಗೆ ಬಂದು ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ.

ವಿಷಯ ಅರಿತ ಗ್ರಾಮಸ್ಥರು ಕೆಲವರು ಸೇರಿ ಮೂವರಲ್ಲಿ ಒಬ್ಬನನ್ನು  ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Related Post