ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿ ಆರೋಪಿಗಳನ್ನ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಈ ಮಧ್ಯೆ ನಟ ದರ್ಶನ್ ಸೇರಿ 6 ಆರೋಪಿಗಳನ್ನ ಮತ್ತೆ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದಾರೆ. ನಟ ದರ್ಶನ್, ವಿನಯ್ ಪ್ರದೋಶ್ , ನಾಗರಾಜ್, ಲಕ್ಷ್ಮಣ್ ಧನರಾಜ್ ಆರು ಆರೋಪಿಗಳನ್ನ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದಾರೆ.
ಆರು ಆರೋಪಿಗಳನ್ನ ಹೊರತುಪಡಿಸಿ ಪ್ರಕರಣದ ಎ1 ಪವಿತ್ರಾಗೌಡ, ಎ3 ಪವನ್, ಎ4 ರಾಘವೇಂದ್ರ 5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ 8 ರವಿಶಂಕರ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಜೈಲುಪಾಲಾಗಿದ್ದಾರೆ.