ಮುಂಬಯಿ: ಯುವನಟಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮುಂಬೈನ ಲೋಖಂಡವಾಲಾದಲ್ಲಿ ನಡೆದಿರುವುದು ವರದಿಯಾಗಿದೆ.
ನೂರ್ ಮಾಲಾಬಿಕಾ ದಾಸ್(31) ನೇಣು ಬಿಗಿದುಕೊಂಡು ಮೃತಪಟ್ಟ ನಟಿ. ಲೋಖಂಡವಾಲಾದಲ್ಲಿರುವ ತನ್ನ ಅಪಾರ್ಟ್ ಮೆಂಟ್ ನಲ್ಲಿ ನೂರು ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ನಟಿಯ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಓಶಿವಾರ ಪೊಲೀಸರು ಆಕೆಯ ಕೊಠಡಿಯ ಬಾಗಿಲು ಮುರಿದು ನೋಡಿದಾಗ ನೂರ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ನೂರ್ ಅವರ ಔಷಧಿಗಳು, ಆಕೆಯ ಮೊಬೈಲ್ ಫೋನ್ ಮತ್ತು ಡೈರಿ ಪೊಲೀಸರಿಗೆ ಆಕೆಯ ಕೋಣೆಯಲ್ಲಿ ಪತ್ತೆಯಾಗಿದೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋರೆಗಾಂವ್‌ನ ಸಿದ್ಧಾರ್ಥ್ ಆಸ್ಪತ್ರೆಗೆ ರವಾನಿಸಿ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಆದರೆ ಆಕೆಯ ಕುಟುಂಬಸ್ಥರು ಯಾರು ಕೂಡ ಅಂತ್ಯಕ್ರಿಯೆಗೆ ಮುಂದೆ ಬಾರದಿದ್ದ ಕಾರಣಕ್ಕೆ ಪೊಲೀಸರು ಎನ್ ಜಿಒ ಜೊತೆ ಸೇರಿ ಭಾನುವಾರ(ಜೂ.9 ರಂದು) ಅಂತಿಮ ವಿಧಿವಿಧಾನವನ್ನು ನೆರವೇರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದಿನ ಕಾರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಸ್ಸಾಂ ಮೂಲದ ನೂರ್ ಬಾಲಿವುಡ್ ನ ಕೆಲ ಸಿನಿಮಾದಲ್ಲಿ ನಟಿಸಿದ್ದರು. ʼಬ್ಯಾಕ್‌ರೋಡ್ ಹಸ್ಲ್ʼ, ʼಸಿಸ್ಕಿಯಾನ್ʼ, ʼವಾಕ್‌ಮನ್ʼ, ʼಟೀಕಿ ಚಟ್ನಿʼ ಮುಂತಾದ ಸಿನಿಮಾದಲ್ಲಿ ನಟಿಸಿದ್ದರು.
ಇತ್ತೀಚೆಗಷ್ಟೇ ಕಾಜೋಲ್ ಅವರ ವೆಬ್ ಸರಣಿ ʼದಿ ಟ್ರಯಲ್ʼ ನಲ್ಲಿ ನಟಿಸಿದ್ದರು. ಸಿನಿಮಾಕ್ಕೆ ಬರುವ ಮುನ್ನ ಅವರು ಮಾಜಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು.