ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ 28 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಕಳೆದ ಶುಕ್ರವಾರ ಬೆಳಗ್ಗೆ ಸರ್ರೆಯಲ್ಲಿ ಗುಂಡಿನ ದಾಳಿ ವೇಳೆ ಯುವರಾಜ್ ಗೋಯಲ್ ಎಂಬ ಭಾರತ ಮೂಲದ ಯುವಕನ ಹತ್ಯೆಯಾಗಿದ್ದು ಪೊಲೀಸರಿಗೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ನ ನರಹತ್ಯಾ ಘಟಕ ಹೇಳಿಕೆಯಲ್ಲಿ ತಿಳಿಸಿದೆ.
ಗೋಯಲ್ ಸರ್ರೆಯಲ್ಲಿನ ಕಾರ್ ಡೀಲರ್‌ಶಿಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗ್ಲೋಬಲ್ ನ್ಯೂಸ್ ವರದಿ ಮಾಡಿದೆ, ಅವರ ಸಹೋದರಿ ಚಾರು ಸಿಂಘ್ಲಾ ಎಂದು ತಿಳಿದು ಬಂದಿದ್ದು, ಹತ್ಯೆಯ ಹಿಂದಿನ ಕಾರಣ ತಿಳಿದುಬಂದಿಲ್ಲ.
ಯುವರಾಜ್ ಗೋಯಲ್ ಸಂಘಟಿತ ಅಪರಾಧಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿಯಿಲ್ಲ. ಗೋಯಲ್ ಅವರ ಸೋದರ ಮಾವ ಬವಾನ್‌ದೀಪ್, ಗುಂಡಿನ ದಾಳಿಗೆ ಮುನ್ನ ಗೋಯಲ್ ಭಾರತದಲ್ಲಿ ವಾಸಿಸುತ್ತಿರುವ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ – ಸರ್ರೆಯ 23 ವರ್ಷದ ಮನ್ವಿರ್ ಬಸ್ರಾಮ್, 20 ವರ್ಷದ ಸಾಹಿಬ್ ಬಸ್ರಾ ಸರ್ರೆಯ, 23 ವರ್ಷದ ಹರ್ಕಿರತ್ ಜುಟ್ಟಿ ಸರ್ರೆಯ ಮತ್ತು 20 ವರ್ಷದ ಒಂಟಾರಿಯೊದ ಕೆಲೋನ್ ಫ್ರಾಂಕೋಯಿಸ್ ಬಂಧಿತರು. ಅವರ ಮೇಲೆ ಪ್ರಥಮ ದರ್ಜೆ ಕೊಲೆ ಆರೋಪ ಹೊರಿಸಲಾಗಿದೆ ಎಂದು ಸಿಬಿಸಿ ನ್ಯೂಸ್ ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ.