ಚಂಡೀಗಢ: ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾದ ನಟ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಅಧಿಕಾರಿಯೊಬ್ಬರು ಕಪಾಳ ಮೋಕ್ಷ ನಡೆಸಿದ ಘಟನೆ ನಡೆದಿದೆ.
“ರೈತರಿಗೆ ಅಗೌರವ ತೋರಿದ” ಆರೋಪದ ಮೇಲೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಕಾನ್‌ಸ್ಟೆಬಲ್ ಒಬ್ಬರು ಕಂಗನಾ ರಣಾವತ್ ಗೆ ಕಪಾಳಮೋಕ್ಷ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಂಗನಾ ರಣಾವತ್ ಅವರು ದೆಹಲಿಗೆ ವಿಮಾನ ಹತ್ತಲು ಹೊರಟಿದ್ದಾಗ ಈ ಘಟನೆ ಸಂಭವಿಸಿದೆ.
ನೂತನ ಸಂಸದೆ ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಅವರನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ.
ಕಪಾಳಮೋಕ್ಷ ಮಾಡಿದ ನಂತರ, ಕಾನ್‌ಸ್ಟೆಬಲ್ ಕುಲ್ವಿಂದರ್ ಅವರು ರೈತರಿಗೆ ಅಗೌರವ ತೋರಿದ್ದಾರೆ ಎಂದು ರಣಾವತ್ ಗೆ ಹೇಳಿದರು, ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ 2020-21ರಲ್ಲಿ ರೈತರು 15 ತಿಂಗಳ ಕಾಲ ನಡೆಸಿದ ಪ್ರತಿಭಟನೆ ಮತ್ತು ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ ಸೇರಿದಂತೆ ಇತರ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.
ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ವಿಡಿಯೋವೊಂದನ್ನು ಕಂಗನಾ ಪೋಸ್ಟ್ ಮಾಡಿದ್ದು, ಆಕ್ರೋಶ ಹೊರ ಹಾಕಿದ್ದಾರೆ.