Breaking
Mon. Jun 17th, 2024

ಶಿವಮೊಗ್ಗ : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ವಿಎ

By Mooka Nayaka News May 30, 2024
Spread the love

ಶಿವಮೊಗ್ಗ : 6 ಸಾವಿರ ರೂ. ಲಂಚ ಪಡೆಯುವಾಗ ಗ್ರಾಮ ಲೆಕ್ಕಿಗರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.

ಗಾಡಿಕೊಪ್ಪ ವೃತ್ತ ಕಸಬಾ 1 ಕಚೇರಿಯ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ನನ್ನ ಕಚೇರಿಯಲ್ಲೇ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಸಂಕೇತ್ ಎಂಬುವವರ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಸುರೇಶ್ ಜಮೀನು ನೋಂದಣಿ ಗಾಗಿ ಹಣದ ಬೇಡಿಕೆ ಇಟ್ಟಿದ್ದು, ಹಣದ ಬೇಡಿಕೆಗೆ ಬೇಸತ್ತು ಸಂಕೇತ್ ಲೋಕಾಯುಕ್ತ ಮೊರೆ ಹೋಗಿದ್ದರು.ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷ ಉಮೇಶ್ ಈಶ್ವರ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Related Post