ಶಿವಮೊಗ್ಗ: ಎಂಎಲ್ ಸಿ ಚುನಾವಣೆಯ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ಅವರು ಮತದಾರರಿಗೆ ಗುಂಡು ಪಾರ್ಟಿ ನೀಡಿದ್ದಾರೆ. ವಿದ್ಯಾವಂತರನ್ನು ದುರಭ್ಯಾಸಕ್ಕೆ ತಳ್ಳುತ್ತಿದ್ದಾರೆ. ಗುಂಡು ಪಾರ್ಟಿಗೆ ಹೋಗಿದ್ದೇವೆ ಎಂದು ಕರೆ ಮಾಡಿ ಹೇಳುತ್ತಿದ್ದಾರೆ. ಶಿವಮೊಗ್ಗ ಬಿಜೆಪಿಯಲ್ಲಿ ಈ ವ್ಯವಸ್ಥೆ ಬಂದಿದೆ, ಬಿಜೆಪಿ ಅಭ್ಯರ್ಥಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಧನಂಜಯ ಸರ್ಜಿ ಸುಂಸ್ಕೃತ ಕುಟುಂಬದಿಂದ ಬಂದವರು. ಹರ್ಷ ಕೂಲೆಯಾದಾಗ ಶಾಂತಿಗಾಗಿ ನಡಿಗೆ ಮಾಡಿದರು, ಹರ್ಷ ಕೂಲೆಯಾದಾಗ ಹಿಂದೂವಾಗಿ ಆಕ್ರೋಶ ಇರಬೇಕಿತ್ತು. ಕೊನೆ ಪಕ್ಷ ಸುಮ್ಮನೆಯಾದರೂ ಇರಬೇಕಿತ್ತು. ಈ ಹಿಂದೆ ಯಾರು ಗುಂಡು ಪಾರ್ಟಿ ಕೊಟ್ಟಿಲ್ಲ. ಗೆಲ್ಲಬೇಕು ಎನ್ನುವ ಕಾರಣಕ್ಕಾಗಿ ಗುಂಡು ಪಾರ್ಟಿ ಕೊಡಿಸುತ್ತಿದ್ದಾರೆ. ಇದನ್ನು ಐದು ಜಿಲ್ಲೆಯ ಮತದಾರರು ಒಪ್ಪುವುದಿಲ್ಲ. ಧನಂಜಯ ಸರ್ಜಿಯನ್ನು ಜನ ಸೋಲಿಸುತ್ತಾರೆ. ನೂರಕ್ಕೆ ನೂರು ರಘುಪತಿ ಭಟ್ ಗೆಲ್ಲುತ್ತಾರೆ ಎಂದರು.
ಡಾಕ್ಟರ್ ಆದವರು ಪದವೀದರರನ್ನು ದುಶ್ಚಟಗಳಿಗೆ ತಳ್ಳುತ್ತಿದ್ದಾರೆ. ಬಿಜೆಪಿಗೆ ಸರ್ಜಿ ಅವಮಾನ ಮಾಡುತ್ತಿದ್ದಾರೆ. ಬಿಜೆಪಿ ವ್ಯವಸ್ಥೆಯಲ್ಲಿ ಅನೇಕ ಚುನಾವಣೆ ಗೆದ್ದಿದ್ದೇನೆ. ನಾನು ಐದು ಬಾರಿ ಎಂಎಲ್ಎ ಬಿಜೆಪಿ ವ್ಯವಸ್ಥೆಯಲ್ಲಿ ಆಗಿದ್ದೇನೆ. ನಲವತ್ತು ವರ್ಷ ಹೆಂಡ ಕುಡಿಸಿ ನಾವು ಪಕ್ಷ ಕಟ್ಟಿಲ್ಲ. ನನ್ನ ಜೀವನದಲ್ಲಿ ನಾನು ಒಂದು ಬಾಟಲಿ ತಗೊಂಡಿಲ್ಲ. ಚುನಾವಣೆಯಲ್ಲಿ ಮೊದಲ ಸ್ಥಾನದಲ್ಲಿ ರಘುಪತಿ ಭಟ್ ಇದ್ದಾರೆ. ಗುಂಡು ಪಾರ್ಟಿ ಮಾಡುವ ವ್ಯಕ್ತಿ ಬೇಕಾ ಸುಸಂಸ್ಕೃತ ವ್ಯಕ್ತಿ ಬೇಕಾ? ನಲವತ್ತು ವರ್ಷದಲ್ಲಿ ಈ ಚುನಾವಣೆಯಲ್ಲಿ ಆಗಿರುವಷ್ಟು ನೋವು ಎಂದು ಆಗಿಲ್ಲ ಎಂದು ಈಶ್ವರಪ್ಪ ಹೇಳಿದರು.