Trending

ತಿದ್ದಿಕೊಳ್ಳಲು ಈಶ್ವರಪ್ಪಗೆ ಸಾಕಷ್ಟು ಸಮಯಾವಕಾಶ ನೀಡಲಾಗಿತ್ತು, ಅವರು ಹಟ ಬಿಡಲಿಲ್ಲ: ಬಿವೈ ವಿಜಯೇಂದ್ರ

Spread the love

ಶಿವಮೊಗ್ಗ: ಕರ್ನಾಟಕ ಬಿಜೆಪಿ ಘಟಕದ ಶಿಸ್ತು ಸಮಿತಿಯು ರಾಜ್ಯ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಎಸ್ ಈಶ್ವರಪ್ಪರನ್ನು  ಕೊನೆಗೂ ಪಕ್ಷದಿಂದ ಉಚ್ಚಾಟಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಎಸ್ ಯಡಿಯೂರಪ್ಪ , ಅದು ಪಕ್ಷದ ಶಿಸ್ತು ಸಮಿತಿಯ ನಿರ್ಧಾರ ಮತ್ತು ಪ್ರಾಯಶಃ ಈಶ್ವರಪ್ಪನವರ ಅಪೇಕ್ಷೆಯೂ ಅದೇ ಆಗಿತ್ತು ಅನಿಸುತ್ತೆ, ತಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

ಅವರ ನಂತರ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಎಲ್ಲ ರಾಜ್ಯಗಳ ಬಿಜೆಪಿ ಘಟಕಗಳಲ್ಲಂತೆ ರಾಜ್ಯ ಬಿಜೆಪಿ ಘಟಕದಲ್ಲೂ ಒಂದು ಶಿಸ್ತು ಸಮಿತಿ ಇದೆ. ತಮ್ಮಿಂದಾಗಿತ್ತಿರುವ ಪ್ರಮಾದಗಳನ್ನು ತಿದ್ದಿಕೊಳ್ಳಲು ಈಶ್ವರಪ್ಪನವರಿಗೆ ಸಾಕಷ್ಟು ಸಮಯಾವಕಾಶ ನೀಡಲಾಗಿತ್ತು. ಆದರೆ ಅವರು ತಮ್ಮ ಧೋರಣೆಗಳನ್ನು ಬದಲಿಸಲಿಲ್ಲ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಭವಿಷ್ಯವಾಣಿ ನುಡಿದ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಕನಿಷ್ಟ ಮೂರು ಲಕ್ಷ ವೋಟುಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

[pj-news-ticker]