ವಿಜಯಪುರ: ಶಿವಮೊಗ್ಗ ಕ್ಷೇತ್ರದಲ್ಲಿ ದೊಡ್ಡ ನಾಯಕರಿದ್ದಾರೆ. ತಾಯಿ ಹೃದಯದ ಪೂಜ್ಯ ತಂದೆಯವರು, ಅವರ ಸಣ್ಣ ಮಗ, ಹಿರಿಯ ಮಗ ಇದ್ದಾರೆ. ಅಲ್ಲಿ ನಮ್ಮದು ಏನೂ ನಡೆಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ನೀವು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಪೂಜ್ಯ ತಂದೆಯವರು, ಅವರ ಸಣ್ಣ-ದೊಡ್ಡ ಮಗ ಸೇರಿ ಮೂರು ಜನ ದೊಡ್ಡ ನಾಯಕರು ಇರುವಾಗ ಶಿವಮೊಗ್ಗದಲ್ಲಿ ನಮ್ಮದೇನೂ ನಡೆಯುವುದಿಲ್ಲ ಎಂದರು.
ಅಲ್ಲಿಯೇ ಉತ್ತರ ಕೊಡುತ್ತೇನೆ
ಗಂಡಸ್ತನವಿದ್ದರೆ ನನ್ನ ವಿರುದ್ಧ ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರನಾಗಿ ಬಸನಗೌಡ ಪಾಟೀಲ ಯತ್ನಾಳ್ ನನ್ನ ವಿರುದ್ಧ ಸ್ಪರ್ಧಿಸಿ ಎಂದು ಸಚಿವ ಶಿವಾನಂದ ಪಾಟೀಲ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಸನಗೌಡ ಪಾಟೀಲ ಯತ್ನಾಳ, ಬಾಲಕೋಟೆಗೆ ಹೋಗಿಯೇ ಉತ್ತರ ನೀಡುತ್ತೇನೆ ಎಂದಿದ್ದಾರೆ.
“ಅಂವಾ ಆಹ್ವಾನ ಕೊಡ್ತಾನೆ, ಆಹ್ವಾನ ಕೊಡೋದು ಅವನ ಉದ್ಯೋಗ, ಪ್ರತಿ ಚುನಾವಣೆಯಲ್ಲಿ ಇಂಥ ಹೇಳಿಕೆಯ ಉದ್ಯೋಗ ಮಾಡಿಕೊಂಡೇ ಅವನು ಜೀವನ ಮಾಡುತ್ತಿದ್ದಾನೆ” ಎಂದು ಹರಿಹಾಯ್ದರು.