Trending

ಶಿವಮೊಗ್ಗ : ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಕುರಿತು ನ.15ರಂದು ಆರೋಗ್ಯ ತಪಾಸಣಾ ಶಿಬಿರ

Spread the love

ಶಿವಮೊಗ್ಗ: ಸೊಂಟ, ಮೊಣಕಾಲು ಹಾಗೂ ಕೀಲು ನೋವಿನಿಂದ ಬಳಲುತ್ತಿರುವವರಿಗೆ ಅನುಕೂಲವಾಗುವಂತೆ ಅಪೋಲೋ ಆಸ್ಪತ್ರೆ ವತಿಯಿಂದ ನವೆಂಬರ್ 15ರಂದು ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಶಿಬಿರವು ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಶಿವಮೊಗ್ಗದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ರಾಜಕುಮಾರ್ ಡಯಾಗ್ನಾಸ್ಟಿಕ್‌ನಲ್ಲಿ ನಡೆಯಲಿದೆ.

ಹಿರಿಯ ಅಸ್ಥಿ ಮತ್ತು ಕೀಲು ಬದಲಾವಣೆ ಶಸ್ತ್ರಚಿಕಿತ್ಸಾ ತಜ್ಞ ಡಾ. ರಾಜಶೇಖರ್ ಕೆ.ಟಿ. ಅವರು ಶಿಬಿರದಲ್ಲಿ ರೋಗಿಗಳನ್ನು ತಪಾಸಣೆ ನಡೆಸಿ, ಸಮಸ್ಯೆಗಳಿಗೆ ಅನುಗುಣವಾಗಿ ಸೂಕ್ತ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡಲಿದ್ದಾರೆ.

ರೋಬೋಟಿಕ್ ಹಿಪ್ ಮತ್ತು ಮೊಣಕಾಲು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಕೀಲು ಸಮಸ್ಯೆಗಳ ಕುರಿತು ತಜ್ಞರಿಂದ ಸಲಹೆ ಪಡೆಯಲು ಅವಕಾಶವಿದೆ. ಕೀಲು ನೋವು, ನಡಿಗೆಯಲ್ಲಿ ತೊಂದರೆ ಅನುಭವಿಸುತ್ತಿರುವವರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

* ದೀಪಕ್: 6363238510

* ದೂರವಾಣಿ: 08182-404808

 

[pj-news-ticker]