Trending

ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು – ಮೊಸರು ಗಿಫ್ಟ್ ನೀಡಿ ವಿನೂತನ ಜಾಗೃತಿ ಅಭಿಯಾನ

Spread the love

ಮೈಸೂರು :  ಕರ್ನಾಟಕ ಸರ್ಕಾರ ಹಾಲು ಮತ್ತು ಮೊಸರಿನ ದರ ಹೆಚ್ಚಳ ಮಾಡಿದೆ. ಇದರಿಂದ ಬಡ ಹಾಗೂ ಮಾಧ್ಯಮ ವರ್ಗದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಈ ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

ಇನ್ನು ಈ ಬೆಲೆ ಏರಿಕೆ ಸಂಬಂಧ ಪ್ರಜ್ಞಾವಂತ ನಾಗರಿಕ ವೇದಿಕೆ, ನವ ದಂಪತಿಗಳಿಗೆ ಹಾಲು ಮೊಸರನ್ನೇ ಉಡುಗೊರೆಯಾಗಿ ಗಮನಸೆಳೆದಿದೆ.

ಮೈಸೂರಿನ ಕಡಕೋಳದ ಶ್ರೀ ಕಾಳಿಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಜು-ಅನನ್ಯ ವಿವಾಹ ನಡೆದಿದ್ದು, ಈ ವೇಳೆ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್ , ಹಾಲು ಹಾಗೂ ಮೊಸರಿನ ಪಾಕೆಟ್ ಉಡುಗೊರೆಯಾಗಿ ನೀಡಿ ವಿಭಿನ್ನ ಜಾಗೃತಿ ಮೂಡಿಸುತ್ತಿದೆ.

ಹಾಲು–ಮೊಸರು ಪ್ರತಿಯೊಂದು ಕುಟುಂಬದ ನಿತ್ಯದ ಅಗತ್ಯ ವಸ್ತು. ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಹೊರೆಯಾಗಿದೆ. ಜನ ಸಾಮಾನ್ಯರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜನರಿಗೆ ಹೊರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಕೋಳ ಜಗದೀಶ್ ಒತ್ತಾಯಿಸಿದ್ದಾರೆ.

[pj-news-ticker]