Trending

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ : 3,100 ರೂಪಾಯಿ ಇಳಿಕೆ

Spread the love

ಬೆಂಗಳೂರು : ಬಹುದಿನಗಳಿಂದ ಕಾಯುತ್ತಿದ್ದ ಗುಡ್‌ನ್ಯೂಸ್‌ ಮಾಸಾಂತ್ಯದಲ್ಲಿ ಆಭರಣ ಗ್ರಾಹಕರಿಗೆ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ.

ಆ ಮೂಲಕ ದೀಪಾವಳಿ ಖರೀದಿ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 310 ರೂಪಾಯಿ ಕುಸಿದು12,730 ರೂಪಾಯಿಗೆ ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 338 ರೂಪಾಯಿ ಇಳಿಕೆಯಾಗಿ 13,888 ರೂಪಾಯಿಗೆ ಬಂದಿದೆ.

22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,01,840 ರೂಪಾಯಿ ಇದೆ. 10 ಗ್ರಾಂ ಚಿನ್ನಕ್ಕೆ 1,27,300 ರೂಪಾಯಿ, 100 ಗ್ರಾಂಗೆ ನೀವು 12,73,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂಗೆ 1,11,104 ರೂಪಾಯಿ, 10 ಗ್ರಾಂಗೆ1,38,880 ರೂಪಾಯಿ ಹಾಗೂ 100 ಗ್ರಾಂಗೆ 13,88,800 ರೂಪಾಯಿ ಇದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,730 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,888 ರೂಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,730 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,888 ರೂಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,745 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ ರೂಪಾಯಿ,

ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,730 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,888 ರೂಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 12,730 ರೂಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,888 ರೂಪಾಯಿ ಇದೆ.

[pj-news-ticker]