Trending

ಚಿಕ್ಕಮಗಳೂರಲ್ಲಿ ‌ನಕಲಿ ನಾಟಿ ತುಪ್ಪ ತಯಾರಿ ಜಾಲ ಪತ್ತೆ: ರಾಶಿ ರಾಶಿ ರಾಸಾಯನಿಕ ಕಂಡು ಅಧಿಕಾರಿಗಳೇ ದಂಗು

Spread the love

ಚಿಕ್ಕಮಗಳೂರು : ನಾಟಿ ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ತಂಡವೊಂದು ಚಿಕ್ಕಮಗಳೂರಿನಲ್ಲಿ ಕಲಬೆರಕೆ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿರುವ ಆಘಾತಕಾರಿ ವಿಚಾರ ಅಧಿಕಾರಿಗಳ ದಾಳಿ ವೇಳೆ ಬಯಲಾಗಿದೆ.

ನಗರದ ಮಾರ್ಕೆಟ್ ರಸ್ತೆಯ ಪಾಳುಬಿದ್ದ ಮನೆಯ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಪೊಲೀಸರ ನೆರವು ಪಡೆದು ರೇಡ್ ನಡೆಸಿದ್ದು, ಮನೆಯಲ್ಲಿ ಪತ್ತೆಯಾಗಿರುವ ರಾಶಿ ರಾಶಿ ರಾಸಾಯನಿಕ ಕಂಡು ಶಾಕ್ ಆಗಿದ್ದಾರೆ.

ಪಾಳು ಬಿದ್ದ ಮನೆಯಲ್ಲಿ ನಕಲಿ ನಾಟಿ ತುಪ್ಪ ತಯಾರಿ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ಪಾಳು ಬಿದ್ದ ಮನೆ ಮೇಲೆ ದಾಲಿ ನಡೆಸಿದ್ದಾರೆ. ಆದರೆ ಈ ವೇಳೆ ಮನೆಯ ಬಾಗಿಲು ಲಾಕ್ ಆಗಿದ್ದ ಕಾರಣ, ಬೀಗ ಮುರಿದು ಒಳ ಪ್ರವೇಶಿಸಿದ ಅಧಿಕಾರಿಗಳು ಡಾಲ್ಡಾ, ವನಸ್ಪತಿ , ಪಾಮ್ ಆಯಿಲ್ ಸೇರಿ ವಿವಿಧ ರಾಸಾಯನಿಕಗಳ ಬಾಟಲಿಗಳನ್ನು ಸ್ಥಳದಲ್ಲಿ ಪತ್ತೆ ಮಾಡಿದ್ದಾರೆ.

ಕಲಬೆರೆಕೆ ನಾಟಿ ತುಪ್ಪವನ್ನು ಖದೀಮರು ಹಳ್ಳಿ ಸೇರಿ ನಗರಗಳಲ್ಲಿಯೂ ಮಾರುತ್ತಿದ್ದರು ಎಂಬುದು ಗೊತ್ತಾಗಿದೆ.

ಇನ್ನು ಈ ರೀತಿ ನಕಲಿ ನಾಟಿ ತುಪ್ಪ ತಯಾರಿಸುತ್ತಿದ್ದ ಗ್ಯಾಂಗ್ನ ಸದಸ್ಯರು ಸ್ಥಳೀಯರಲ್ಲ. ಬದಲಾಗಿ ಬಳ್ಳಾರಿಯಿಂದ ಬಂದವರು ಎಂಬುದು ಕೂಡ ಬಹಿರಂಗಗೊಂಡಿದೆ. ಕಳೆದ ಹಲವು ವರ್ಷಗಳಿಂದಲೂ ಇವರು ಇದೇ ಕೆಲಸ ಮಾಡಿಕೊಂಡು ಬಂದಿರುವ ವಿಚಾರವೂ ತನಿಖೆ ವೇಳೆ ಬಯಲಾಗಿದೆ.

ಪುಟ್ಟ ಮಕ್ಕಳು ಸೇರಿದಂತೆ ಹಿರಿಯರವರೆಗೂ ಬಳಸುವ ನಾಟಿ‌ ತುಪ್ಪದ ಹೆಸರಲ್ಲಿ ಕಲಬೆರೆಕೆ ಪದಾರ್ಥ ಮಾರುತ್ತಿದ್ದ ವಿಚಾರ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದು, ಎಸ್ಕೇಪ್ ಆಗಿರುವ ದಂಧೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅವರೆಲ್ಲ ಖಾಕಿ ಖೆಡ್ಡಾಕ್ಕೆ ಬಿದ್ದ ಬಳಿಕವೇ ಈ ಬಗ್ಗೆ ಇನ್ನಷ್ಟು ವಿಚಾರಗಳು ಬಹಿರಂಗವಾಗಲಿದೆ.

[pj-news-ticker]