Trending

ಭದ್ರಾವತಿಯಲ್ಲಿ ‘ತಾಯಿನುಡಿ’ ಕವನ ಸಂಕಲನ ಅನಾವರಣ

Spread the love

ಭದ್ರಾವತಿ : ಶಿಕ್ಷಕ ಹಾಗೂ ಕವಿ ಮಂಜಾನಾಯ್ಕ ಬಿ.ಆರ್. ಬಳೂರು ಅವರ ‘ತಾಯಿನುಡಿ’ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ್ ಅವರು ಲೋಕಾರ್ಪಣೆ ಮಾಡಿದರು.

ಜನ್ನಾಪುರದ ಶ್ರೀ ಬಸವೇಶ್ವರ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡವನ್ನು ಸರಾಗವಾಗಿ ಮಾತನಾಡುವ ಇಂದಿನ ಮಕ್ಕಳು ಕನ್ನಡ ವಿಷಯದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕನ್ನಡ ಭಾಷೆಯ ಓದು, ಬರವಣಿಗೆ ಮತ್ತು ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಬಿ.ವಿ.ಎಸ್. ಅಧ್ಯಕ್ಷ ಹೆಚ್.ಬಿ. ಸಿದ್ದೇಶ್ ವಹಿಸಿದ್ದರು. ಕೃತಿಯ ಕುರಿತು ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅವರು ಮಾತನಾಡಿ, ‘ತಾಯಿನುಡಿ’ ಕವನ ಸಂಕಲನದ ಸಾಹಿತ್ಯಿಕ ವೈಶಿಷ್ಟ್ಯಗಳನ್ನು ಪರಿಚಯಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ಸುರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಶಿಕಾರಿಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಎಸ್. ರಘು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭದ್ರಾವತಿ ಶಾಖೆಯ ಅಧ್ಯಕ್ಷ ಗಂಗಾನಾಯ್ಕ ಗೊಂದಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಎಸ್.ಬಿ.ವಿ.ಎಸ್. ಕಾರ್ಯದರ್ಶಿ ಎಲ್.ಬಿ. ಶೇಖರಪ್ಪ, ಶೈಕ್ಷಣಿಕ ಸಲಹೆಗಾರ ಜಿ. ಮೂರ್ತಿ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೆಚ್.ಆರ್. ಲತಾ ಕುಮಾರಿ, ಪ್ರಕಾಶ್ ಎನ್. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ‘ತಾಯಿನುಡಿ’ ಕೃತಿಯ ರಚನೆಕಾರ ಮಂಜಾನಾಯ್ಕ ಬಿ.ಆರ್. ಬಳೂರು ಅವರನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಸ್ನೇಹಿತರ ಬಳಗ ಆತ್ಮೀಯವಾಗಿ ಸನ್ಮಾನಿಸಿತು.

 

[pj-news-ticker]