Trending

ಭದ್ರಾವತಿಯಲ್ಲಿ SIR ಜಾಗೃತಿ ಬೀದಿನಾಟಕ : ಮತದಾರರಿಗೆ ಫಾರಂ ಭರ್ತಿ ಮಾಡಿ ಸಲ್ಲಿಸಲು ಮನವಿ

Spread the love

ಭದ್ರಾವತಿ : ಡಾ. ಬಿ.ಆರ್. ಅಂಬೇಡ್ಕರ್ ಜಾನಪದ ಕಲಾಸಂಘ (ರಿ), ಜನ್ನಾಪುರ, ಭದ್ರಾವತಿ ವತಿಯಿಂದ ಸಾಮಾಜಿಕ ಕಳಕಳಿಯಿಂದ ಸ್ವಯಂಪ್ರೇರಿತವಾಗಿ ಇಂದು ರಂಗಪ್ಪ ಸರ್ಕಲ್‌ನಲ್ಲಿ ಸಾರ್ವಜನಿಕರಿಗೆ SIR ಕುರಿತು ಅರಿವು ಮೂಡಿಸುವ ಜಾಗೃತಿ ಬೀದಿನಾಟಕ ಪ್ರದರ್ಶನ ನಡೆಸಲಾಯಿತು.

ಕಾರ್ಯಕ್ರಮವನ್ನು ಭದ್ರಾವತಿ ತಹಶೀಲ್ದಾರ್ ಶ್ರೀ ಪ್ರದೀಪ್ ದೇವಗಿರಿ ಉದ್ಘಾಟಿಸಿದರು. ನಗರಸಭೆ ಆಯುಕ್ತ ಹೇಮಂತ್ ಕೆ.ಎನ್., ಚುನಾವಣೆ ಶಿರಸ್ತೇದಾರ್ ಗಿರಿರಾಜ್ ಎಸ್.ಓ., ಶಿರಸ್ತೇದಾರ್ ತಿಲಕ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಹಾಗೂ ಅಂಬೇಡ್ಕರ್ ಕಲಾಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಉಪಸ್ಥಿತರಿದ್ದರು.

ಬೀದಿನಾಟಕದ ಮೂಲಕ ಮತದಾರರು ತಮ್ಮ ಮನೆಗೆ ಬಂದಿರುವ SIR ಫಾರಂ ಅನ್ನು ಸರಿಯಾಗಿ ಭರ್ತಿ ಮಾಡಿ ಕಡ್ಡಾಯವಾಗಿ ವಾಪಸ್ ಸಲ್ಲಿಸುವಂತೆ ಮನವಿ ಮಾಡಲಾಯಿತು.

ಬೀದಿನಾಟಕದಲ್ಲಿ ಹಿರಿಯ ಕಲಾವಿದರಾದ ರವಿಕುಮಾರ್ ಕೆ.ಎಸ್., ತಮಟೆ ಜಗದೀಶ್, ಎನ್. ಕದರಿ ನರಸಿಂಹಯ್ಯ, ರಘುನಾಯ್ಕ ಟಿ., ಚಿದಾನಂದ ಬಿ., ಮನೋಹರ, ಸುನೀತಬಾಯಿ ಹಾಗೂ ರವಿಕುಮಾರ್ ಜಿ. ಅಭಿನಯಿಸಿದರು.

ಕಾರ್ಯಕ್ರಮಕ್ಕೆ  ತಾಲೂಕು ಪಂಚಾಯತ್ ಸಿಬ್ಬಂದಿ, ಪೊಲೀಸ್ ಇಲಾಖೆ, ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಸಹಕಾರ ನೀಡಿದರು.

 

[pj-news-ticker]