ಬಿಹಾರ: ಹಾವೊಂದು ತನಗೆ ಕಚ್ಚಿತೆಂದು ಸಿಟ್ಟಿಗೆದ್ದ ವ್ಯಕ್ತಿ ಹಾವನ್ನೇ ಹಿಡಿದು ಅದಕ್ಕೆ ಎರಡು ಭಾರಿ ಕಚ್ಚಿದ ವಿಚಿತ್ರ ಘಟನೆಯೊಂದು ಬಿಹಾರದ ನವಾಡ ಪ್ರದೇಶದಲ್ಲಿ ನಡೆದಿದೆ.
ರೈಲ್ವೆ ಉದ್ಯೋಗಿಯಾಗಿರುವ ಸಂತೋಷ್ ಲೋಹರ್ ಎಂಬ ವ್ಯಕ್ತಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕುಳಿದ ವ್ಯಕ್ತಿ.
ಸಂತೋಷ್ ಲೋಹಾರ್ ನವಾಡ ಅರಣ್ಯ ಪ್ರದೇಶದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲೇ ರಾತ್ರಿ ಇತರ ಕಾರ್ಮಿಕರ ಜೊತೆ ಉಳಿದುಕೊಂಡಿದ್ದ ಕಳೆದ ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ ಸಂತೋಷ್ ಗೆ ಹಾವೊಂದು ಕಚ್ಚಿದೆ ಇದರಿಂದ ಗಾಬರಿಗೊಂಡ ಸಂತೋಷ್ ಗೆ ಆತನ ಗೆಳೆಯರು ಕಚ್ಚಿದ ಹಾವನ್ನು ತಿರುಗಿ ಕಚ್ಚಿದರೆ ಮೈಯಲ್ಲಿದ್ದ ವಿಷ ವಾಪಸ್ಸು ಹಾವಿಗೆ ಹೋಗುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆ ಅದರಂತೆ ಸಂತೋಷ್ ತನಗೆ ಕಚ್ಚಿದ ಹಾವನ್ನು ಹಿಡಿದು ಅದಕ್ಕೆ ಎರಡು ಭಾರಿ ಕಚ್ಚಿದ್ದಾನೆ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಸಂತೋಷ್ ಗುಣಮುಖನಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ವಾಪಸ್ಸಾಗಿದ್ದಾನೆ ಆದರೆ ಪಾಪ ಕಚ್ಚಿದ ಹಾವು ಮಾತ್ರ ಸಂತೋಷ್ ಕಚ್ಚಿದ ಪೆಟ್ಟಿಗೆ ಪ್ರಾಣವನ್ನೇ ಕಳೆದುಕೊಂಡಿದೆ.