Trending

ಜಿಮ್‌ ಮುಗಿಸಿ ಬರ್ತಿದ್ದಂತೆ ಕುಸಿದು ಬಿದ್ದ ಬಾಡಿ ಬಿಲ್ಡರ್​ ಸಾವು : ಹೃದಯಾಘಾತಕ್ಕೆ ಬಲಿ

Spread the love

ದಾವಣೆಗೆರೆ: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ದಾವಣಗೆರೆಯ ಪ್ರತಿಭಾನ್ವಿತ ಯುವ ಬಾಡಿ ಬಿಲ್ಡರ್ ಸುಶೀಲ್ ಕುಮಾರ್ (26) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಜಿಮ್ ಮುಗಿಸಿ ಮನೆಗೆ ಬರ್ತಿದ್ದ ವೇಳೆ ಸುಶೀಲ್ ಕುಮಾರ್​ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಬಾಡಿ ಬಿಲ್ಡಿಂಗ್​​ನಲ್ಲಿ  ಸುಶೀಲ್​ ಪ್ರಶಸ್ತಿಗಳಿಸಿದ್ದಾರೆ.

ಜಿಮ್ ಮುಗಿಸಿ ಮನೆಗೆ ಬಂದ ಸುನೀಲ್ ಕೆಲವೇ ಕ್ಷಣಗಳಲ್ಲಿ ಸುಶೀಲ್‌ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 26 ವರ್ಷದ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಮುಟ್ಟಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯದ ಕೀರ್ತಿ ಪಾತಾಕೆ ಹಾರಿಸಿದ್ದ ಪ್ರತಿಭಾನ್ವಿತ ಸುಶೀಲ್ ಸಾವಿನಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿದೆ.

ಮೃತ ಸುಶೀಲ್ ಕುಮಾರ್ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

ಇತ್ತೀಚಿನ ದಿನದಲ್ಲಿ ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಜಿಮ್ ಮಾಡುವಾಗ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ವ್ಯಾಯಾಮ ಮಾಡುವಾಗ ಎದೆನೋವು, ಉಸಿರಾಟದ ತೊಂದರೆ, ತಲೆಸುತ್ತು, ಅಥವಾ ಎದೆಭಾರ ಎನಿಸಿದರೆ ತಕ್ಷಣವೇ ವ್ಯಾಯಾಮ ನಿಲ್ಲಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

[pj-news-ticker]