Trending

ಟಿಎಂಸಿ ಬಿಡಲು ಬಯಸುವವರು ಹೋಗಬಹುದು : ಮಮತಾ ಖಡಕ್ ಸಂದೇಶ

Spread the love

ಕೋಲ್ಕತಾ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಸಂಘಟನೆಯನ್ನು ಪುನರ್ನಿರ್ಮಿಸಲು ಟಿಎಂಸಿ ಮುಖ್ಯಸ್ಥೆ, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. ಇದೆ ವೇಳೆ, ”ಪಕ್ಷವನ್ನು ತೊರೆಯಲು ಬಯಸುವವರು ಹಾಗೆ ಮಾಡಲು ಸ್ವತಂತ್ರರು” ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ತಮ್ಮ ಕಾಲಿಘಾಟ್ ನಿವಾಸದಲ್ಲಿ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಭಾಗವಹಿಸಿದ್ದ ಪಕ್ಷದ ಅಭ್ಯರ್ಥಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಮಮತಾ, ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ ತೃಣಮೂಲ ಕಾಂಗ್ರೆಸ್ ಮತ್ತೆ ಮೇಲೇರುತ್ತದೆ ಎಂದು ಹೇಳಿದ್ದಾರೆ.

“ಬೇರೆ ಪಕ್ಷಗಳಿಗೆ ಹೋಗುತ್ತಿರುವವರನ್ನು ಹೋಗಲು ಬಿಡಿ. ನಾನು ಪಕ್ಷವನ್ನು ಹೊಸದಾಗಿ ಪುನರ್ನಿರ್ಮಿಸುತ್ತೇನೆ. ಉಳಿದುಕೊಂಡಿರುವವರಿಗೆ, ಹಾನಿಗೊಳಗಾದ ಪಕ್ಷದ ಕಚೇರಿಗಳನ್ನು ಪುನರ್ನಿರ್ಮಿಸಿ, ಬಣ್ಣ ಬಳಿದು ಮತ್ತೆ ತೆರೆಯಿರಿ ಎಂದು ನಾನು ಹೇಳುತ್ತೇನೆ. ಅಗತ್ಯವಿದ್ದರೆ, ನಾನು ಕೂಡ ಬಣ್ಣ ಬಳಿಯುತ್ತೇನೆ.

ತೃಣಮೂಲ ಕಾಂಗ್ರೆಸ್ ಎಂದಿಗೂ ತಲೆಬಾಗುವುದಿಲ್ಲ. ಜನಾದೇಶವನ್ನು ಲೂಟಿ ಮಾಡಲಾಗಿದೆ” ಎಂದು ಬ್ಯಾನರ್ಜಿ ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

[pj-news-ticker]