Breaking
Sun. Sep 8th, 2024

ಸಂಗಣ್ಣ ಕರಡಿಗೆ ತಪ್ಪಿದ ಟಿಕೆಟ್: ಬೆಂಬಲಿಗರಿಂದ ಆಕ್ರೋಶ, ಬಿಜೆಪಿ ಕಚೇರಿ ಪೀಠೋಪಕರಣ ಧ್ವಂಸ

By Mooka Nayaka News Mar 14, 2024
Spread the love

ಕೊಪ್ಪಳ : ಲೋಕಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ  ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅವರ ಬೆಂಬಲಿಗರು ಬಿಜೆಪಿ ಕಚೇರಿಯಲ್ಲಿ ಕಲ್ಲು ತೂರಾಟ ನಡೆಸಿ ಪೀಠೋಪಕರಣ ಧ್ವಂಸ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕೊಪ್ಪಳ ಬಿಜೆಪಿ ಕಚೇರಿಯಲ್ಲಿ ಹೈಡ್ರಾಮಾ ನಡೆದಿದ್ದು, ಸಂಗಣ್ಣ ಕರಡಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಪೀಠೋಪಕರಣವನ್ನ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಕಿಟಕಿ ಗಾಜು ಪುಡಿ ಪುಡಿಯಾಗಿದ್ದು, ಹಲವು ಕಛೇರಿ ಪೀಠೋಪಕರಣಗಳೆಲ್ಲವೂ ಪುಡಿಪುಡಿಯಾಗಿವೆ ಎನ್ನಲಾಗಿದೆ.

ಸಂಗಣ್ಣ ಕರಡಿ ಅವರನ್ನ ಭೇಟಿಯಾಗಲು ಬಂದ ಬಿಜೆಪಿ ಅಭ್ಯರ್ಥಿ ಬಸವರಾಜು ಅವರಿಗೆ ಗೋಬ್ಯಾಕ್ ಎಂದು ಘೋಷಣೆ ಕೂಗಿ ಕಿಡಿಕಾರಿದ್ದಾರೆ ಎನ್ನಲಾಗಿದೆ.

ಇನ್ನು ಟಿಕೆಟ್ ಕೈತಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಂಗಣ್ಣ ಕರಡಿ, ನನಗೆ ಯಾಕೆ ಟಿಕೆಟ್ ಮಿಸ್ ಆಗಿದೆ ಗೊತ್ತಿಲ್ಲ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗಬೇಕು. ಬಿಜೆಪಿ ನಾಯಕರು ನನ್ನನ್ನ ಸಂಪರ್ಕಿಸಿಲ್ಲ. ಬೇರೆ ಪಕ್ಷದ ಯಾವ ನಾಯಕರೂ ಸಂಪರ್ಕಿಸಿಲ್ಲ ಬೇರೆ ಪಕ್ಷಕ್ಕೆ ಹೋಗುವ ನಿರ್ಧಾರ ನನ್ನ ಬಳಿ ಇಲ್ಲ. ಇಡೀ ಜಗತ್ತು ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡಿರುವ ಹಿನ್ನೆಲೆಯಲ್ಲಿ ನಾವು ಕೂಡ ಮೋದಿ ಅವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದೇವೆ ಎಂದರು.

Related Post