ಕಾರವಾರ : ನೂರಾರು ರೋಗಿಗಳ ಜೀವ ಉಳಿಸಿದ್ದ ವೈದ್ಯರೊಬ್ಬರು ಕೊನೆಗಳಿಗೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ತಿವ್ರ ಎದೆ ನೋವಿನಿಂದ ಅಸುನೀಗಿರುವ ಹೃದಯವಿದ್ರಾವಕ ಘಟನೆ ಕರ್ನಾಟಕ ಗೋವಾ ಗಡಿಯಲ್ಲಿರುವ ಡಿಗ್ಗಿ ಎಂಬ ಗ್ರಾಮದಲ್ಲಿ ನಡೆದಿದೆ.
ಡಾ.ಲೆನ್ವರ್ ಲೋಬೋ ಮೃತ ವೈದ್ಯ. ಸದ್ಯ ಇಡೀ ಡಿಗ್ಗಿ ಗ್ರಾಮವೇ ಡಾ. ಲೋಬೋ ಮರಣ ಹಿನ್ನೆಲೆ ಕಂಬನಿ ಮಿಡಿದಿದೆ.
ನಡೆದಿದ್ದೇನು?
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡಿಗ್ಗಿ ಕೂಗ್ರಾಮ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಈ ಡಿಗ್ಗಿ ಗ್ರಾಮಕ್ಕೆ ಹೋಗಲು ಕೆಲವರು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಕಳೆದ ಮೂರು ವರ್ಷಗಳಿಂದ ಡಾ.ಲೆನ್ವರ್ ಲೋಬೋ ಕೆಲಸ ಮಾಡುತ್ತಿದ್ದರು.
ಶಿರಸಿಯ ಸ್ಕೋಡಾ ವೇಸ್ ಸಂಸ್ಥೆ ಕರಾರಿನ ಮೇಲೆ ಗ್ರಾಮದಲ್ಲಿ ಆಸ್ಪತ್ರೆ ನಡೆಸುತಿತ್ತು. ಚಿಕಿತ್ಸೆ ಪಡೆಯಲು ಗೋವಾ ರಾಜ್ಯದ ಕೂಗ್ರಾಮದಿಂದ ಜನರು ಬರುತ್ತಿದ್ದರು. ಡಾ.ಲೋಬೋ ಚಿಕಿತ್ಸೆಯಿಂದ ಅದೆಷ್ಟೋ ಜನರು ಗುಣಮುಖರಾಗಿದ್ದಾರೆ. ಅವರ ಕಾರ್ಯಕ್ಕೆ ಇಡೀ ಡಿಗ್ಗಿ ಗ್ರಾಮಕ್ಕೆ ಗ್ರಾಮವೇ ಶ್ಲಾಘಿಸುತ್ತಿತ್ತು. ಆದರೆ ದುರ್ವಿದಿ ಕೊನೆಯುಸಿರೆಳೆದಿದ್ದಾರೆ.
ರಾತ್ರಿ ವೇಳೆ ವೈದ್ಯ ಲೋಬೋ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆದರೆ ಆಸ್ಪತ್ರೆಗೆ ಹೋಗಲು ವಾಹನ ಹಾಗೂ ಮೊಬೈಲ್ ನೆಟವರ್ಕ್ ಕೂಡ ಇರಲಿಲ್ಲ. ಹೀಗಾಗಿ ಬೆಳಗಿನ ಜಾವ ವಾಹನ ತರಿಸಿಕೊಂಡು ಜೋಯಿಡಾ ಕಡೆಗೆ ಹೊರಟ್ಟಿದ್ದರು. ಈ ವೇಳೆ ಎದೆನೋವು ಮತ್ತಷ್ಟು ಹೆಚ್ಚಳವಾಗಿ ಸೂಕ್ತ ಚಿಕಿತ್ಸೆ ಸಿಗದೇ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
