ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದ ಹಿನ್ನೆಲೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.
ಸೌಜನ್ಯ ಪೂಜಾರಿ (22) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ನಿನ್ನೆ ತರಕಾರಿ ತಂದು ಸಾಂಬಾರ್ ಮಾಡಲು ತಂದೆ ನಟೇಶ್ ಸೂಚಿಸಿದ್ದರು. ಮಧ್ಯಾಹ್ನ ಊಟದ ವೇಳೆ ಸಾಂಬಾರ್ ಮಾಡಿಲ್ಲವೆಂದು ಸೌಜನ್ಯಗೆ ತಂದೆ ಬೈದಿದ್ದಾರೆ ಎನ್ನಲಾಗಿದೆ.
ಈ ನಡುವೆ ನಟೇಶ್ ಪಕ್ಕದ ಮನೆಗೆ ಸಾಂಬಾರ್ ತರಲು ತೆರಳಿದ್ದಾಗ, ಮನೆಯಲ್ಲಿ ಒಬ್ಬಳೇ ಇದ್ದ ಸೌಜನ್ಯ ನೇಣಿಗೆ ಶರಣಾಗಿದ್ದಾಳೆ. ಘಟನೆ ತಿಳಿದು ಕುಟುಂಬಸ್ಥರು ಶೋಕದಲ್ಲಿದ್ದಾರೆ.
ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
