ತೀರ್ಥಹಳ್ಳಿ: ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ವಾಗ್ದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅನಘ ಕೆ.ಎಸ್. ಒಟ್ಟು 625 ಅಂಕಗಳಿಗೆ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದ ಸಾಧಕಿಯಾಗಿದ್ದಾರೆ.
ಈಕೆ ಕೋಣಂದೂರಿನ ಮೇಲಿನ ಕಡಗೋಡುವಿನ ಮಂಗಳ ಮತ್ತು ಶಿವಕುಮಾರ ದಂಪತಿಗಳ ಪುತ್ರಿ ಆಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲೂ ಒಟ್ಟು ಐದು ರ‍್ಯಾಂಕ್ ಗಳನ್ನು ವಾಗ್ದೇವಿ ಶಿಕ್ಷಣ ಸಂಸ್ಥೆ ಪಡೆದಿತ್ತು. ಈಗ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇಯ ರ‍್ಯಾಂಕ್ ಪಡೆಯುವ ಮೂಲಕ ತೀರ್ಥಹಳ್ಳಿ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಬರೆದಿದೆ.
